ಮಕ್ಕಳು ಜೀವನದ ಮಹತ್ವ ತಿಳಿದುಕೊಳ್ಳಲು ಬಾಲ್ಯದಿಂದಲೇ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು

0 336

ಸೊರಬ : ಮಕ್ಕಳಿಗೆ ಬಾಲ್ಯದಿಂದಲೇ ಮೌಲ್ಯಾಧಾರಿತ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳು ಜೀವನದ ಮಹತ್ವವನ್ನು ತಿಳಿದುಕೊಳ್ಳಬಹುದು ಎಂದು ಚಂದ್ರಗುತ್ತಿ ಗ್ರಾ.ಪಂ ಉಪಾಧ್ಯಕ್ಷ ಎಂ.ಬಿ ರೇಣುಕಾ ಪ್ರಸಾದ್ ಹೇಳಿದರು.

ಚಂದ್ರಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಲ್ಲಿ ಯಾವುದೇ ಜಾತಿ ಧರ್ಮಗಳ ಬಗ್ಗೆ ಭಾವನೆಗಳು ಇರುವುದಿಲ್ಲ ಹಾಗಾಗಿ ಮಕ್ಕಳನ್ನು ದೇವರ ಸಮಾನ ಎನ್ನುತ್ತೇವೆ. ಶಾಲೆಯಲ್ಲಿ ಮಕ್ಕಳು ಬಾಲ್ಯದಿಂದಲೇ ಉತ್ತಮವಾಗಿ ಶಿಕ್ಷಣ ಕಲಿತಾಗ ಸಮಾಜದಲ್ಲಿ ಉನ್ನತ ಪ್ರಜೆಯಾಗಲು ಸಾಧ್ಯವಾಗುತ್ತದೆ. ನಾವು ವಿಚಾರಧಾರೆಗಳ ಆಧಾರದ ಮೇಲೆ ಪ್ರತಿಯೊಂದು ನಡೆದಾಗ ಮಾತ್ರ ನಾಡು ಮತ್ತು ನುಡಿ ದೇಶವನ್ನು ಸದೃಢಗೊಳಿಸಬಹುದು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಧನಂಜಯ ಕಲ್ಲೇರ್ ನೆರವೇರಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಧನಂಜಯ ಕಲ್ಲೇರ್ ಮಾತನಾಡಿ, ಶಾಲಾ ಅಭಿವೃದ್ಧಿ ಸಮಿತಿಯವರ ಹಾಗೂ ಶಿಕ್ಷಕರು ಪೋಷಕ ವರ್ಗದವರ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.

ಉರ್ದು ಶಾಲಾ ಮಕ್ಕಳಿಗೆ ಉರ್ದು ಶಿಕ್ಷಣದ ಜೊತೆಗೆ ಜ್ಞಾನ ಬೆಳೆಸುವುದಕ್ಕೆ ಕನ್ನಡ, ಮತ್ತು ಆಂಗ್ಲ ಭಾಷೆಗಳ ಶಿಕ್ಷಣ ನೀಡಬೇಕು ಎಂದರು.

ಉರ್ದು ಕಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಹೀರ್ ಖಾನ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವರದಿ ವಾಚನವನ್ನು ಶಿಕ್ಷಕಿ ಸಾವಿತ್ರಮ್ಮ ಮಂಡಿಸಿದರು.

ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದಂತಹ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಗ್ರಾ.ಪಂ ಸದಸ್ಯ ರತ್ನಾಕರ್ ಎಂ.ಪಿ, ಪ್ರಮುಖರಾದ ಹೆಚ್ ಯೂಸುಬ್ ಸಾಬ್ ಅಂಕರವಳ್ಳಿ, ಜಯಶೀಲ್ ಗೌಡ್ರು, ವಹಾಬ್ ಖಾನ್, ಉಮ್ಮರ್ ಸಾಬ್, ಹಯಾತ್ ಖಾನ್, ಯಶ್ವಂತಪ್ಪ ಮಾಸ್ತರ್, ಉರ್ದು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಫಿ ಅಹಮದ್, ಸಿ.ಆರ್.ಪಿ ಅಬ್ದುಲ್ ಸೈಯದ್, ಶಿಕ್ಷಕರ ಸಂಘದ ನಿರ್ದೇಶಕಿ ಸುನಂದ ಕೆ.ಇ, ಮುಖ್ಯ ಶಿಕ್ಷಕ ಗೌಸಲಿ, ಶಿಕ್ಷಕ ಪ್ರಭಾಕರ್ ಹೆಚ್.ಎಸ್, ಸಲೀಂ, ಇರ್ಷಾದ್, ಇಮ್ರಾನ್, ಇರ್ಫಾನ್, ಕುತುಬ್, ಶೈರಾಜ್, ಸೇರಿದಂತೆ ಶಿಕ್ಷಕ ವರ್ಗದವರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!