ಮನೆಗೆ ಬೀಗ ಹಾಕಿಕೊಂಡು ಸೌದಿ ಅರೇಬಿಯಾಕ್ಕೆ ಹೋಗಿ ಒಂದು ವರ್ಷದ ನಂತರ ವಾಪಾಸ್ ಆಗಿದ್ದ ಮಹಿಳೆಗೆ ಕಾದಿತ್ತು ಶಾಕ್ !

0 375

ಶಿವಮೊಗ್ಗ : 2022ರ ಮೇ.25ರಂದು ಆರ್.ಎಂ.ಎಲ್ ನಗರದ ವಾಸಿ ಸಲ್ಮಾಖಾನಂ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತನ್ನ ಗಂಡನ ಬಳಿ ಸೌದಿ ಅರೇಬಿಯಾಕ್ಕೆ ಹೋಗಿದ್ದು, ನಂತರ 2023ರ ಜೂ.06 ರಂದು ವಾಪಾಸ್ ಬಂದು ನೋಡಿದಾಗ ಯಾರೋ ಕಳ್ಳರು ಇವರ ಮನೆಯ ಇಂಟರ್ ಲಾಕ್ ನ್ನು ಮುರಿದು ಒಳಗಡೆ ಪ್ರವೇಶ ಮಾಡಿ ಗಾಡ್ರೇಜ್ ಬೀರುವಿನಲ್ಲಿದ್ದ 6,14,214 ರೂ. ಬೆಲೆ ಬಾಳುವ 139.320 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಹಾಗು 1,00,350 ಬೆಲೆ ಬಾಳುವ 500 ರಿಯಾಲ್ ಮುಖಬೆಲೆ 9 ಸೌದಿ ಅರೇಬಿಯಾದ ನೋಟುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ.ಕೆ., ಅನಿಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಹಾಗು ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಹಾಗು ಬಾಬು ಅಂಜನಪ್ಪ ಪೊಲೀಸ್‌ ಉಪಾಧೀಕ್ಷಕರು ಶಿವಮೊಗ್ಗ ಎ ಉಪ ವಿಭಾಗ, ಹಾಗು ಸುರೇಶ್ ಎನ್ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಬಿ ಉಪ ವಿಭಾಗ ಹಾಗು ಪೊಲೀಸ್ ಇನ್ಸ್‌ಪೆಕ್ಟರ್ ಪಾಟೀಲ್ ಇವರ ಮಾರ್ಗದರ್ಶನಲ್ಲಿ 2024ರ ಫೆ.02 ರಂದು ಆರೋಪಿ ಶಿವಮೊಗ್ಗ ನಗರದ ಸೂಪರ್ ಮಾರ್ಕೆಟ್ ಹಿಂಭಾಗದ 1ನೇ ಕ್ರಾಸ್ ತಿಮ್ಮಾನಗರ ನಿವಾಸಿ ಸಲೀಂ ಬಿನ್ ಅಬ್ದುಲ್ಲಾ (44) ಈತನನ್ನು ಬಂಧಿಸಿದ್ದು ಆರೋಪಿಯು ಕಳುವು ಮಾಡಿ ಮುತ್ತೂಟ್ ಫೈನಾನ್ಸ್, ಐ.ಐ.ಎಫ್.ಎಲ್ ಫೈನಾನ್ಸ್ ಗಳಲ್ಲಿ ಗಿರವಿ ಇಟ್ಟಂತಹ 8,28,400 ರೂ. ಬೆಲೆ ಬಾಳುವ 155.35 ಗ್ರಾಂ ಬಂಗಾರದ ಒಡವೆಗಳನ್ನು ಹಾಗು 8350 ರೂ ಬೆಲೆ ಬಾಳುವ 109 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗು 21,400 ರೂ ಬೆಲೆ ಬಾಳುವ ಬೆಲೆ ಬಾಳುವ ವಾಚ್ ಗಳು ಆರ್ಟಿಫಿಷಿಯಲ್ ಒಡವೆಗಳು ವ್ಯಾನಿಟಿ ಬ್ಯಾಗ್ ಗಳನ್ನು 69,000 ರೂ ಬೆಲೆ ಬಾಳುವ 500 ರಿಯಾಲ್ ಮುಖ ಬೆಲೆ 6 ಸೌದಿ ಅರೇಬಿಯಾದ ನೋಟುಗಳನ್ನು (ಒಟ್ಟು 10 ಲಕ್ಷ ರೂ.) ಅಮಾನತು ಪಡಿಸಿಕೊಂಡಿದ್ದಾರೆ.

ಪೊಲೀಸ್ ಅಧೀಕ್ಷಕರು ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!