ಚುನಾವಣೆಯಲ್ಲಿ ಸೋತರು ಕಿಮ್ಮನೆಗೆ ‘ಡಿಮ್ಯಾಂಡಪ್ಪೊ ಡಿಮ್ಯಾಂಡ್’

0 94

ತೀರ್ಥಹಳ್ಳಿ : ಚುನಾವಣೆಯಲ್ಲಿ ಸೋತರು ಕಿಮ್ಮನೆ ರತ್ನಾಕರ್ ರವರಿಗೆ ಡಿಮ್ಯಾಂಡ್ ಶುರುವಾಗಿದೆ. ಉಪ ಮುಖ್ಯಮಂತ್ರಿ ಪತ್ರ ಬರೆದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದೂರವಾಣಿ ಕರೆ ಮಾಡಿ ಮಾತನಾಡಿರುವುದಾಗಿ ತಿಳಿದುಬಂದಿದೆ.

ಕಿಮ್ಮನೆ ರತ್ನಾಕರ್ ಸಿಎಂ ರಾಜಕೀಯ ಕಾರ್ಯದರ್ಶಿ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸಿಎಂ ಸಿದ್ದರಾಮಯ್ಯ ಕರೆಗೆ ಒಪ್ಪಿಕೊಂಡಿದ್ದಾರೆಯೇ ಎಂಬುದನ್ನು ಸ್ವತಃ ಅವರಿಂದಾನೇ ತಿಳಿಸಬೇಕಿದೆ‌.

ಇನ್ನೂ ಪತ್ರ ಬರೆದಿರುವ ಉಪ ಮುಖ್ಯಮಂತ್ರಿ ಡಿಕೆಶಿ, ಕಿಮ್ಮನೆ ರತ್ನಾಕರ್ ರವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಗುವ ಮುನ್ಸೂಚನೆಯನ್ನು ನೀಡಿದ್ದಾರೆಯೇ ? ಎಂಬ ಇದೀಗ ಪ್ರಶ್ನೆ ಹುಟ್ಟು ಹಾಕಿದ್ದು, ತೀರ್ಥಹಳ್ಳಿ ಕ್ಷೇತ್ರದಲ್ಲಿ ಸೋತರು ಕಿಮ್ಮನೆಗೆ ಡಿಮ್ಯಾಂಡ್ ಅಂತೂ ಬಂದಿದ್ದು ದಟ್ಟವಾಗಿದೆ.

ಪತ್ರದ ಮೂಲಕ ಸಮಾಧಾನ ಪಡಿಸುವ ಪ್ರಯತ್ನ ಮಾಡಿರುವ ಡಿಕೆಶಿ, ಪರಾಜಿತರಾದರು ಪಕ್ಷಕ್ಕೆ ಕೆಲಸ ನಿರ್ವಹಿಸಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.‌ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವಂತೆ ಸೂಚನೆ ನೀಡಿರುವ ಸಾಧ್ಯತೆಯೂ ಇದೆ ತಿಳಿದುಬಂದಿದೆ.


ಪಕ್ಷ ಸಂಘಟನೆಗೆ ಶ್ರಮ ವಹಿಸುವಂತೆ ಮನವಿ ಮಾಡಿಕೊಂಡಿರುವ ಉಪಮುಖ್ಯಮಂತ್ರಿ, ಸಂಘಟನೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿ ಕಾರ್ಯನಿರ್ವಹಿಸುವಂತೆ ಕಿಮ್ಮನೆ ಯವರಲ್ಲಿ ವಿನಂತಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!