ಹೊಸನಗರ : ಆಧುನಿಕ ಯುಗದಲ್ಲಿ ಯುವಕರು ಜಂಕ್‌ಫುಡ್‌ಗಳ ಸೇವನೆಯಿಂದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಯಾವುದೇ ಕಾರಣಕ್ಕೂ ಜಂಕ್‌ಫುಡ್ ನೀಡಬಾರದು ಎಂದು ಹೊಸನಗರ ಆರೋಗ್ಯ ಇಲಾಖೆಯ ಕರಿಬಸಮ್ಮ ಹೇಳಿದರು.
ಹೊಸನಗರ ವಲಯದ ಗುಳ್ಳೆಕೊಪ್ಪ ಕಾರ್ಯಕ್ಷೇತ್ರದ ಸ್ನೇಹ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಜನರು ಹೆಚ್ಚು ಜಂಕ್ ಫುಡ್‌ಗಳಿಗೆ ಅಡಿಟ್ ಆಗಿದ್ದು ಇದರಿಂದ ಜನರು ಅಪೌಷ್ಟಿಕ ಕೊರತೆಯಿಂದ ಬಳಲುತ್ತಿದ್ದು ಪೌಷ್ಟಿಕ ಆಹಾರವನ್ನು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಬೇಕು ಮತ್ತು ನಮ್ಮ ಹಿತ್ತಲಲ್ಲೇ ಸಿಗುವ ಸೊಪ್ಪು, ತರಕಾರಿಗಳು, ಗಡ್ಡೆ-ಗೆಣಸುಗಳನ್ನು ಬಳಕೆ ಮಾಡಿ ಕಾಳು ಬೆಳೆಗಳನ್ನು ದ್ವಿದಳ ಧಾನ್ಯಗಳನ್ನು ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ದೇವಾನಂದ್ ಎನ್. ಆರ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಾವೆಲ್ಲ ಸ್ವಾವಲಂಬಿಗಳಾಗಿದ್ದೇವೆ ಯೋಜನೆಯ ಎಲ್ಲಾ ಕಾರ್ಯಕ್ರಮಗಳನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ. ಪ್ರತಿನಿತ್ಯ ಜೀವನದಲ್ಲಿ ಪೌಷ್ಟಿಕ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಿ ಮತ್ತು ಮಕ್ಕಳಿಗೆ ಮನೆಯಲ್ಲೇ ಮಾಡುವ ಆಹಾರವನ್ನು ತಯಾರಿ ಮಾಡಿಕೊಡಿ ಎಂದರು.
ವಲಯದ ಮೇಲ್ವಿಚಾರಕರಾದ ಗಣಪತಿ ಒಕ್ಕೂಟದ ಅಧ್ಯಕ್ಷರಾದ ರಾಮಕೃಷ್ಣ, ಹಾಲಮ್ಮನವರು ಸಭೆಯ ಅಧ್ಯಕ್ಷತೆ ವಹಿಸಿದ್ದು, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಾಂತಕುಮಾರಿ ಪ್ರಾಸ್ತಾವಿಕ ಮಾತನಾಡಿದರು. ಸೇವಾ ಪ್ರತಿನಿಧಿಗಳು ಕೇಂದ್ರ ಸದಸ್ಯರು ಪೌಷ್ಟಿಕ ಆಹಾರವನ್ನು ತಯಾರಿಸಿಕೊಂಡು ಬಂದಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





