ಭಾರಿ ಮಳೆಗೆ ರಸ್ತೆ ಮಧ್ಯೆ ಬಿದ್ದ ಭಾರಿ ಪ್ರಮಾಣದ ಹೊಂಡ | ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಿಪ್ಪನ್‌ಪೇಟೆ ವಿದ್ಯಾರ್ಥಿಗಳು ಆಯ್ಕೆ

Written by malnadtimes.com

Published on:

RIPPONPETE | ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಠದಜಡ್ಡು ಎಸ್.ಸಿ.ಕಾಲೋನಿ-ನಾಗರಹಳ್ಳಿ ಸಂಪರ್ಕದ ಸೇತುವೆ ಭಾರಿ ಮಳೆಗೆ ಕುಸಿದು ರಸ್ತೆ ಮಧ್ಯವೇ ದೊಡ್ಡ ಹೊಂಡ ಬಿದ್ದಿದ್ದು ಭಾರಿ ಇದರಿಂದ ರೈತನಾಗರೀಕರು ಭಯಬೀತರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸಂಪರ್ಕ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಹುಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಂಗಳ ದೇವರಾಜ್ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ದೇವೇಂದ್ರಜೈನ್, ಪಂಚಾಯ್ತಿ ಅಭಿವೃದ್ಧಿ ಆಧಿಕಾರಿ ರಮೇಶ್ ಹಾಗೂ ಸತೀಶ್ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ರಸ್ತೆ ಮಧ್ಯದಲ್ಲಿ ಬಿದ್ದಿರುವ ಹೊಂಡವನ್ನು ತುಂಬಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿ, ಉಳಿದಂತೆ ಸಂಪರ್ಕ ಸೇತುವೆಯನ್ನು ಮಳೆ ಕಡಿಮೆಯಾಗುತ್ತಿದ್ದಂತೆ ದುರಸ್ಥಿಗೊಳಿಸುವುದಾಗಿ ತಿಳಿಸಿದರು.

ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಿಪ್ಪನ್‌ಪೇಟೆ ವಿದ್ಯಾರ್ಥಿಗಳು ಆಯ್ಕೆ

RIPPONPETE | ಬೆಂಗಳೂರು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಿನಿ ಒಲಿಂಪಿಕ್ 14 ವರ್ಷದೊಳಗಿನ ಚಾಂಪಿಯನ್ ಶಿಪ್‌ಗೆ ನಡೆದ ಆಯ್ಕೆಯಲ್ಲಿ ರಿಪ್ಪನ್‌ಪೇಟೆ ರಾಮಕೃಷ್ಣ ವಿದ್ಯಾಲಯ ಹಾಗೂ ಆನಂದಪುರ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಆಯ್ಕೆಯಾಗಿದ್ದಾರೆ.

rippon pete
rippon pete

ರಿಪ್ಪನ್‌ಪೇಟೆ ರಾಮಕೃಷ್ಣ ವಿದ್ಯಾಲಯ ಹಾಗೂ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಆಯ್ಕೆಯಾಗಿರುವ ವಿದ್ಯಾರ್ಥಿಗಳಾದ ಅನುಷ್ಕಾ, ಸೋನಾಲಿ, ಅವನ್ಯ, ಅಯುಶ್ರೀ, ಬಾಲಕರ ವಿಭಾಗದಲ್ಲಿ ನಿಶಾಂತ್, ಇವರನ್ನು ರಾಮಕೃಷ್ಣ ವಿದ್ಯಾಲಯ ವ್ಯವಸ್ಥಾಪಕರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Read More

ಶಾಸಕ ಬೇಳೂರು ಗೋಪಾಲಕೃಷ್ಣ ವಿದೇಶಕ್ಕೆ ತೆರಳಿರುವುದು ಮೋಜು ಮಸ್ತಿಗಲ್ಲ, ರಾಜಕೀಯ ವಿರೋಧಿಗಳ ಆರೋಪದಲ್ಲಿ ಹುರುಳಿಲ್ಲ

ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನಲ್ಲಿ ದಾಖಲಾದ ಮಳೆ ವಿವರ ಹೀಗಿದೆ

ಚಕ್ರಾ, ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಖಾತೆ ಜಮೀನಿಗೆ ಬೇಲಿ, ಕ್ರಮಕ್ಕೆ ಆಗ್ರಹ

Leave a Comment