ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿ !

0 444

ಕಳಸ‌: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ (Gas Cylinder) ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಕಳಸ-ಬಾಳೆಹೊನ್ನೂರು ಮುಖ್ಯ ರಸ್ತೆಯ ಯಡ್ರುಗೋಡು ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.

ಶಿವಮೊಗ್ಗದಿಂದ ಕಳಸಕ್ಕೆ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ರಸ್ತೆಗೆ ಅಡ್ಡ ಬಂದ ಜಾನುವಾನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಪರಿಣಾಮ ನೂರಾರು ಗ್ಯಾಸ್ ತುಂಬಿದ ಸಿಲಿಂಡರ್ ಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು,ಸುದ್ದಿ ತಿಳಿದ ಕೂಡಲೇ ಸಿಲಿಂಡರ್ ಗಳನ್ನು ಸ್ಥಳಾಂತರ ಮಾಡಲಾಯಿತು. ಅದೃಷ್ಟವಶಾತ್ ಯಾವು ಸಿಲಿಂಡರ್ ಸೋರಿಕೆಯಾಗದ ಹಿನ್ನಲೆಯಲ್ಲಿ ಭಾರೀ ಅನಾಹುತ ತಪ್ಪಿದೆ.

ಇನ್ನು ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಳಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave A Reply

Your email address will not be published.

error: Content is protected !!