ಚಿಕ್ಕಮಗಳೂರು ನಗರಸಭೆಯಲ್ಲಿ ಗದ್ದುಗೆ ಗುದ್ದಾಟ ; ಅಧ್ಯಕ್ಷರ ಬದಲಾವಣೆಯ ಬದಲು ಇಲ್ಲಿ ಕುರ್ಚಿಯೇ ಬದಲು !

0 121

ಚಿಕ್ಕಮಗಳೂರು : ಇಲ್ಲಿನ ನಗರಸಭೆಯಲ್ಲಿ ಗದ್ದುಗೆಗಾಗಿ ಗುದ್ದಾಟ ಜೋರಾಗಿದೆ, ಅವಧಿ ಮುಗಿದರೂ ರಾಜೀನಾಮೆ ನೀಡದೆ ಸತಾಯಿಸುತ್ತಿರೋ ಅಧ್ಯಕ್ಷ ವೇಣುಗೋಪಾಲ್ ವಿರುದ್ಧ ತಮ್ಮದೇ ಪಕ್ಷದ ಸದಸ್ಯರು ಗರಂ ಆಗಿರುವ ಘಟನೆ ನಡೆದಿದೆ.

ಅಧ್ಯಕ್ಷರ ಅವಧಿ ಮುಗಿದಿದ್ದರೂ ಇನ್ನೂ ರಾಜೀನಾಮೆ ನೀಡದೆ ಸತಾಯಿಸುತ್ತಿದ್ದ ವೇಣುಗೋಪಾಲ್ ವಿರುದ್ಧ ಕೆಂಡಾಮಂಡಲರಾದ ಬಿಜೆಪಿ ಸದಸ್ಯರು ನಗರ ಸಭೆಗೆ ತೆರಳಿ ಅಧ್ಯಕ್ಷರು ಕೂರುವ ಸೋಫಾ ಚೇರ್ ತೆಗೆದು ಆ ಜಾಗಕ್ಕೆ ಪ್ಲಾಸ್ಟಿಕ್ ಕುರ್ಚಿ ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದ್ದರೂ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಅಧ್ಯಕ್ಷರು ಸರಕಾರಿ ಕಾರ್ಯಕ್ರಮ ಮತ್ತು ನಗರಸಭೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಕಂಡು ಬರುತ್ತಿದ್ದು, ವಿಶ್ವಾಸ ಮತಯಾಚನೆ ಮಾಡುವರೆಗೂ ಯಾವುದೇ ಸರಕಾರಿ ಸಮಾರಂಭದಲ್ಲಿ ಪಾಲ್ಗೊಳ್ಳಬಾರದು. ಅಧ್ಯಕ್ಷರು ಕಾನೂನಿಗೆ ಬೆಲೆ ಕೊಡುವುದಿದ್ದರೆ, ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲವೇ ವಿಶ್ವಾಸ ಮತಯಾಚನೆ ಸಭೆ ಕರೆಯಬೇಕು. ನಾವೆಲ್ಲರೂ ಮತ ನೀಡಿದ್ದರಿಂದ ಅವರು ನಗರಸಭೆ ಅಧ್ಯಕ್ಷರಾಗಿದ್ದಾರೆ. ಅವಿಶ್ವಾಸ ಮಂಡನೆಗೆ ಪತ್ರ ನೀಡಿದ್ದೇವೆ. ಆ ಕಾರಣದಿಂದ ಅಧ್ಯಕ್ಷರ ಕುರ್ಚಿ ಇರಬಾರದು ಎಂದು ಖುರ್ಚಿಯನ್ನು ಬದಲಾಯಿಸಿದ್ದೇವೆ ಹಾಗೂ ಕಚೇರಿ ಲಾಕ್ ಮಾಡಿದ್ದೇವೆ.
– ಮಧುಕುಮಾರ್ ರಾಜ್ ಅರಸ್, ನಗರಸಭೆ ಸದಸ್ಯ

ವೇಣುಗೋಪಾಲ್ ಈ ಹಿಂದೆ ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಹಿಂಪಡೆದಿದ್ದರು, ಆದರೆ ಇದೀಗ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಗಿದರೂ ರಾಜೀನಾಮೆ ನೀಡಲು ಮುಂದಾಗದ ಹಿನ್ನೆಲೆಯಲ್ಲಿ ಸ್ವತಃ ಬಿಜೆಪಿ ಸದಸ್ಯರೇ ಈ ನಿರ್ಧಾರಕ್ಕೆ ಬಂದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ನಗರಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಚಿಕ್ಕಮಗಳೂರು ನಗರಸಭೆಯಲ್ಲಿ ಎರಡು ತಿಂಗಳಿಂದ ಅಧ್ಯಕ್ಷಗಿರಿಯ ದೊಂಬರಾಟ ಮುಂದುವರೆದಿದ್ದು ಇನ್ನು ಅಂತ್ಯ ಕಾಣಲಿಲ್ಲ.

Leave A Reply

Your email address will not be published.

error: Content is protected !!