ಕಾಫಿನಾಡಿಗೆ ಲಗ್ಗೆ ಇಟ್ಟ ಬೀಟಮ್ಮ ಗುಂಪಿನ ಕಾಡಾನೆಗಳು

0 437

ಚಿಕ್ಕಮಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಕಾಡಾನೆಗಳ ಹಿಂಡು ಬರುತ್ತಿವೆ. ಹಾಸನದಲ್ಲಿ ಉಪಟಳ ನೀಡುತ್ತಿದ್ದ ಬೀಟಮ್ಮ ಗುಂಪಿನ ಕಾಡಾನೆಗಳು ಈಗ ಚಿಕ್ಕಮಗಳೂರಿಗೆ ಲಗ್ಗೆ ಇಟ್ಟಿವೆ. ನಗರದ ಹೊರವಲಯದಲ್ಲಿ ಬೀಡುಬಿಟ್ಟಿರುವ 30ಕ್ಕೂ ಹೆಚ್ಚು ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ ಆಗಮಿಸಿವೆ.

ಅಭಿಮನ್ಯು ನೇತೃತ್ವದಲ್ಲಿ ಬೀಟಮ್ಮ ಗುಂಪಿನ ಆನೆಗಳನ್ನು ಕಾಡಿಗಟ್ಟಲು ಸಿದ್ಧತೆ ನಡೆದಿದೆ. ಚಿಕ್ಕಮಗಳೂರು ಬಳಿಯ ಮತ್ತಾವರಕ್ಕೆ ನಾಗರಹೊಳೆ ಹಾಗೂ ದುಬಾರೆಯಿಂದ ಎಂಟು ಸಾಕಾನೆಗಳು ಬಂದಿವೆ. ಸಾಕಾನೆಗಳಾದ ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಧನಂಜಯ ಹಾಗೂ ಅಶ್ವತ್ಥಾಮ, ಸುಗ್ರೀವರಿಂದ ಮಂಗಳವಾರ ಮಧ್ಯಾಹ್ನದ ನಂತರ ಕಾರ್ಯಾಚರಣೆ ನಡೆಸಲಾಗುತ್ತದೆ.

ಇದೀಗ ಬೀಟಮ್ಮ ಟೀಂ ಕೆ.ಆರ್.ಪೇಟೆಯ ನೀಲಗಿರಿ ಪ್ಲಾಂಟೇಶನ್ ಬಳಿ ಬಂದಿವೆ. ಇವುಗಳನ್ನು ಕಾಡಿಗಟ್ಟಲು ಸಿದ್ಧತೆ ನಡೆದಿದೆ. ಈ ಕಾರ್ಯಚರಣೆಗಾಗಿ ನೂರಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ನುರಿತ ತಜ್ಞರು, ಅಧಿಕಾರಿಗಳು ಭಾಗಿಯಾಗಿದ್ದಾರೆ.

ನಗರದ ಮುಗ್ತಿಹಳ್ಳಿಯಲ್ಲಿರುವ ಆಂಬರ್‌ವ್ಯಾಲಿ ವಸತಿ ಶಾಲೆಯಲ್ಲಿ ಸುಮಾರು 30 ಕಾಡಾನೆಗಳು ಸೋಮವಾರ ಬೀಡು ಬಿಟ್ಟಿದ್ದವು. ಆದರೆ ಅರಣ್ಯ ಸಿಬ್ಬಂದಿಗಳು ಪಟಾಕಿ ಸಿಡಿಸಿದ್ದರಿಂದ ಆಂಬರ್ ವ್ಯಾಲಿ ಶಾಲಾ ಅವರಣದಿಂದ ಸುಮಾರು 30 ಕಾಡಾನೆಗಳು ಹೊರಬಂದಿವೆ.

ವಸತಿ ಶಾಲೆಯೊಳಗೆ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ, ಶಾಲೆಯಲ್ಲಿರುವ ಇರುವ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೂ ವಸತಿ ಶಾಲೆಯಿಂದ ಹೊರಗಡೆ ಬರಬೇಡಿ ಎಂದು ಅರಣ್ಯ ಇಲಾಖೆ ಸೂಚನೆ ನೀಡಿತ್ತು.

25 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಆಂಬರ್ ವ್ಯಾಲಿ ವಸತಿ ಶಾಲೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಗ್ತಿಹಳ್ಳಿ ಬಳಿಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ವಸತಿ ಶಾಲೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.

ನಿಷೇಧಾಜ್ಞೆ ಜಾರಿ:
ಗ್ರಾಮಾಂತರ ವಿಭಾಗ ವ್ಯಾಪ್ತಿಯ ಅಂಬಳೆ ಹೋಬಳಿ ಕೆ. ಆರ್. ಪೇಟೆ ಗ್ರಾಮದ ಸಮೀಪದ ನೆಡುತೋಪು ಪ್ರದೇಶದಲ್ಲಿ ಬಿಟ್ಟಮ್ಮ ಆನೆ ತಂಡವು ಬೀಡು ಬಿಟ್ಟಿದ್ದು ಸುಮಾರು 20 ರಿಂದ 25 ಆನೆಗಳು ತಂಡದಲ್ಲಿದ್ದು ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳುವ ಹಿನ್ನೆಲೆಯಲ್ಲಿ ನಿಷೇದಾಜ್ಞೆಯನ್ನು ಜನವರಿ 30ರ ಬೆಳಿಗ್ಗೆಯಿಂದ ಜನವರಿ 31ರ ಬೆಳಿಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಪವಿಭಾಗದ ಉಪವಿಭಾಗೀಯ ದಂಡಾಧಿಕಾರಿ ಹಾಗೂ ಉಪವಿಭಾಗಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕೆ. ಆರ್. ಪೇಟೆ, ಮತ್ತಿಕೆರೆ, ಮಾವಿನಕೆರೆ, ನೆರಡಿ, ಬಿಗ್ಗದೇವನಹಳ್ಳಿ, ಬೀಗ್ಗನಹಳ್ಳಿ, ಹಲುವಳ್ಳಿ, ಕಂಬಿಹಳ್ಳಿ, ತಗದೂರು. ಕುಂದೂರು, ಕೆಸವಿನ ಮನೆ, ಮಳ್ಳೂರು, ಕೆಂಚನಹಳ್ಳಿ, ಹಾದಿಹಳ್ಳಿ, ಗ್ರಾಮಗಳ ವ್ಯಾಪ್ತಿಯಲ್ಲಿ ಈ ಕಾಡಾನೆಯನ್ನು ವಾಪಾಸ್ಸು ಅರಣ್ಯಕ್ಕೆ ಹಿಂಮ್ಮೆಟ್ಟಿಸಲು ಕಾರ್ಯಾಚರಣೆ ನಡೆಸುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಸಂರಕ್ಷಣಾ ದೃಷ್ಟಿಯಿಂದ ಕೆ. ಆರ್. ಪೇಟೆ, ಮತ್ತಿಕೆರೆ, ಮಾವಿನಕೆರೆ, ನೆರಡಿ, ಬಿಗ್ಗದೇವನಹಳ್ಳಿ, ಬೀಗ್ಗನಹಳ್ಳಿ, ಹಲುವಳ್ಳಿ, ಕಂಬಿಹಳ್ಳಿ, ತಗದೂರು. ಕುಂದೂರು, ಕೆಸವಿನಮನೆ, ಮಳ್ಳೂರು, ಕೆಂಚನಹಳ್ಳಿ, ಹಾದಿಹಳ್ಳಿ ಗ್ರಾಮಗಳು ವ್ಯಾಪ್ತಿಯಲ್ಲಿದೆ.

Leave A Reply

Your email address will not be published.

error: Content is protected !!