ಪವಿತ್ರವನದ ಸಮೀಪ ಮದ್ಯದಂಗಡಿ ತೆರೆಯದಂತೆ ಒತ್ತಾಯ

0 36

ಚಿಕ್ಕಮಗಳೂರು: ನಗರದ ಪವಿತ್ರವನ ಸಮೀಪ ಮದ್ಯದ ಅಂಗಡಿ ತೆರೆಯದಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ.


ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿ, ಜಿಲ್ಲಾ ಪಂಚಾಯತ್ ಸಮೀಪದ ಪವಿತ್ರವನದ ಸುತ್ತಮುತ್ತಲು ಯಾವುದೇ ಮದ್ಯದಂಗಡಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.


ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್‍ಕುಮಾರ್ ಮಾತನಾಡಿ, ಎಸ್.ಸಿ, ಎಸ್.ಟಿ. ಕುಂದುಕೊರತೆ ಸಭೆಯಲ್ಲಿ ಮದ್ಯದ ಅಂಗಡಿಗೆ ಪರವಾನಿಗೆ ನೀಡಬಾ ರದೆಂದು ಅಬಕಾರಿ ಉಪನಿರೀಕ್ಷಕರು ಮತ್ತು ಎಸ್ಪಿ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು.


ಪವಿತ್ರವನದ ಸಮೀಪದ ಪ. ಜಾತಿ ಮತ್ತು ಪ. ಪಂಗಡದ ಬಾಲಕರ ವಿದ್ಯಾರ್ಥಿನಿಲಯ ಮತ್ತು ಅಕ್ಕಪಕ್ಕದಲ್ಲಿ ಸರ್ಕಾರಿ ಇಲಾಖೆ, ಶಾಲೆಗಳಿವೆ. ಮದ್ಯದಂಗಡಿಯನ್ನು ತೆರೆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ. ಬಡ ಮಕ್ಕಳು ದುಶ್ಚಟಕ್ಕೆ ಬಲಿಯಾಗುವ ಸಂಭವವಿದೆ.

ಪವಿತ್ರವನ ಸಮೀಪ ರಿಲಕ್ಸ್ ಬಾರ್ ಅಂಡ್ ರೆಸ್ಟೋರೆಂಟ್ ತೆರೆದಿದ್ದು, ತೆರವುಗೊಳಿಸಬೇಕು. ಒಂದು ತೆರವಿಗೆ ವಿಳಂಭ ನೀತಿ ಅನುಸರಿಸಿದರೆ ಸ್ವಾತಂತ್ರ್ಯ ದಿನಾಚರಣೆಯಂದು ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Leave A Reply

Your email address will not be published.

error: Content is protected !!