ಯುವ ಪೀಳಿಗೆಯು ಉಜ್ವಲ ಭವಿಷ್ಯಕ್ಕಾಗಿ ದುಷ್ಚಟಗಳಿಂದ ದೂರವಿರಬೇಕು: ವರಸಿದ್ಧಿ ವೇಣುಗೋಪಾಲ್

0 37

ಚಿಕ್ಕಮಗಳೂರು: ಇಂದಿನ ಯುವ ಪೀಳಿಗೆ ಹೆತ್ತವರ ಆಶಯ ಮತ್ತು ಕನಸುಗಳನ್ನು ಅರ್ಥಮಾಡಿಕೊಳ್ಳಬೇಡು ಉಜ್ವಲ ಭವಿಷ್ಯಕ್ಕಾಗಿ ಮದ್ಯಪಾನ, ಧೂಮಪಾನ ಹಾಗೂ ಮಾದಕವಸ್ತುದತವುಗಳಿಂದ ದೂರವಿರಬೇಕು ಎಂದು ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಯುವಕರಿಗೆ ಸಲಹೆ ನೀಡಿದರು.


ಡಾ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಮೇಲೆ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹಲವು ಆಶಯಗಳನ್ನು ಹೊಂದಿರುತ್ತಾರೆ. ಅವರ ಭವಿಷ್ಯಕ್ಕಾಗಿ ಕೂಲಿ ನಾಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಸಾಲ ಸೋಲ ಮಾಡಿ ಓದಿಸುತ್ತಾರೆ. ಇಂದಿನ ಯುವ ಪೀಳಿಗೆ ಅದನ್ನು ಅರ್ಥ ಮಾಡಿಕೊಳ್ಳುದೆ ದುಃಶಷ್ಟಗಳಿಗೆ ಬಲಿಯಾಗುತ್ತಿದ್ದರೆ. ಯುವಕ ಯುವತಿಯರು ಯಾವುದೇ ದಃಶಷ್ಟಗಳಿಗೆ ಬಲಿಯಾಗದೆ, ಪೋಷಕರ ನಂಬಿಕೆಯನ್ನು ಉಳಿಸುವತ್ತ ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಿ ಉತ್ತಮ ಹೆಸರುಗಳಿಸಿದರೆ ಹೆತ್ತವರ ಶ್ರಮ ಸಾರ್ಥಕವಾಗುತ್ತದೆ ಎಂದರು.


ಯುವಜನತೆ ಈ ದೇಶದ ಆಧಾರ ಸ್ತಂಭಗಳು ಅವರು ಮಾದಕ ವಸ್ತುಗಳಿಂದ ದುಷ್ಚಟಗಳಿಂದ ದೂರ ಉಳಿದು ಉತ್ತಮ ನಾಗರೀಕರಾದರೆ ರಾಷ್ಟ್ರದ ಭವಿಷ್ಯ ಸಹ ಉಜ್ವಲವಾಗುತ್ತದೆ. ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ಬಗ್ಗೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮವಹಿಸಬೇಕು ಎಂದರು.


ಅಬಕಾರಿ ಇಲಾಖೆ ಉಪ ಆಯುಕ್ತೆ ಕೆ.ಕೆ. ಸುಮಿತ್ರ ಮಾತನಾಡಿ ಯುವಜನತೆ ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಅಬಕಾರಿ ಅಧೀಕ್ಷಕ ಕೆ.ಜಿ ಸಂತೋಷ್ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಹಾಗೂ ಮಾದಕ ವಸ್ತುಗಳ ಮಾರಾಟ ಮಾಡಿದರೆ ಆಗುವ ಶಿಕ್ಷೆಗಳ ಕುರಿತು ಕಾನೂನಿನ ಕುರಿತು ವಿವರಿಸಿದರು.

ವ್ಯಸನ ದಿನಾಚರಣೆ ಪ್ರಯುಕ್ತ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ನಂತರ ಮಾದಕ ವಸ್ತುಗಳನ್ನು ತ್ಯಜಿಸುವ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು.

Leave A Reply

Your email address will not be published.

error: Content is protected !!