SAGARA : ಪ್ರವಾಸಕ್ಕೆ ಬಂದಿದ್ದ ಯುವಕ ಜೋಗ ಜಲಪಾತದ ಬಳಿ ಕಣ್ಮರೆ !

Written by malnadtimes.com

Published on:

SAGARA | ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಯುವಕನೊರ್ವ ಜೋಗ ಜಲಪಾತದ (Jog Falls) ಬಳಿ ಕಣ್ಮರೆಯಾಗಿದ ಘಟನೆ ನಡೆದಿದ್ದು, ಯುವಕನಿಗಾಗಿ ಕಳೆದ 6 ದಿನಗಳಿಂದ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
Instagram Group Join Now

ಹೊಸನಗರ ತಾಲೂಕಿನಾದ್ಯಂತ ಸೋಮವಾರದಿಂದ ಶಾಲೆಗಳು ಪುನರಾರಂಭ

ಗದಗ ಮೂಲದ ಆನಂದ್ (24) ನಾಪತ್ತೆಯಾಗಿರುವ ಯುವಕ. ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಈತ ಜೋಗ ಜಲಪಾತ ನೋಡಲೆಂದು ಇದೇ ಜುಲೈ 15ರಂದು ಆಗಮಿಸಿದ್ದನು. ಯಾತ್ರಿ ನಿವಾಸದ ಸೀತಾಕಟ್ಟೆ ಸೇತುವೆ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಹೋಗಿದ್ದನು. ಆದರೆ ಅಂದಿನಿಂದ ಯುವಕ ನಾಪತ್ತೆಯಾಗಿದ್ದಾನೆ. ಬ್ಯಾಗ್ ಮಾತ್ರ ಸಿಕ್ಕಿದ್ದು ಯುವಕ ಎಲ್ಲಿದ್ದಾನೆ ಎಂದು ಇನ್ನೂ ತಿಳಿದು ಬಂದಿಲ್ಲ.

jog falss
image:Koushikgk

ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಜಲಪಾತದ ಬಳಿ ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಜೋಗ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣ ಕೆಲಸಕ್ಕೆ ಅಡ್ಡಿ ಆಗುತ್ತಿದೆ.

Ripponpet | ವಾಡಿಕೆಗಿಂತ 76.9 ಮಿ‌.ಮೀ. ಮಳೆ ಹೆಚ್ಚಳ, ಕೃಷಿ ಚಟುವಟಿಕೆ ವಿಳಂಬ !

Leave a Comment