SAGARA | ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಯುವಕನೊರ್ವ ಜೋಗ ಜಲಪಾತದ (Jog Falls) ಬಳಿ ಕಣ್ಮರೆಯಾಗಿದ ಘಟನೆ ನಡೆದಿದ್ದು, ಯುವಕನಿಗಾಗಿ ಕಳೆದ 6 ದಿನಗಳಿಂದ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಹೊಸನಗರ ತಾಲೂಕಿನಾದ್ಯಂತ ಸೋಮವಾರದಿಂದ ಶಾಲೆಗಳು ಪುನರಾರಂಭ
ಗದಗ ಮೂಲದ ಆನಂದ್ (24) ನಾಪತ್ತೆಯಾಗಿರುವ ಯುವಕ. ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಈತ ಜೋಗ ಜಲಪಾತ ನೋಡಲೆಂದು ಇದೇ ಜುಲೈ 15ರಂದು ಆಗಮಿಸಿದ್ದನು. ಯಾತ್ರಿ ನಿವಾಸದ ಸೀತಾಕಟ್ಟೆ ಸೇತುವೆ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಹೋಗಿದ್ದನು. ಆದರೆ ಅಂದಿನಿಂದ ಯುವಕ ನಾಪತ್ತೆಯಾಗಿದ್ದಾನೆ. ಬ್ಯಾಗ್ ಮಾತ್ರ ಸಿಕ್ಕಿದ್ದು ಯುವಕ ಎಲ್ಲಿದ್ದಾನೆ ಎಂದು ಇನ್ನೂ ತಿಳಿದು ಬಂದಿಲ್ಲ.

ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಜಲಪಾತದ ಬಳಿ ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಜೋಗ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣ ಕೆಲಸಕ್ಕೆ ಅಡ್ಡಿ ಆಗುತ್ತಿದೆ.
Ripponpet | ವಾಡಿಕೆಗಿಂತ 76.9 ಮಿ.ಮೀ. ಮಳೆ ಹೆಚ್ಚಳ, ಕೃಷಿ ಚಟುವಟಿಕೆ ವಿಳಂಬ !

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.