ಅಪರೂಪದ ರಕ್ತಗನ್ನಡಿ ಹಾವು ಪತ್ತೆ !

Written by malnadtimes.com

Published on:

KALASA ; ಉರಗ ಸಂತತಿಯಲ್ಲೇ ಅತ್ಯಂತ ಅಪಾಯಕಾರಿ ಎಂದು ಹೇಳಲಾದ ರಕ್ತಗನ್ನಡಿ ಹಾವು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಸೋಮವಾರ ಪತ್ತೆಯಾಗಿದೆ.

WhatsApp Group Join Now
Telegram Group Join Now
Instagram Group Join Now

ಮಲೆನಾಡಿನಲ್ಲಿ ಈ ಹಾವಿಗೆ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವೆಂದು ಕರೆಯುತ್ತಾರೆ. ದೇಹದ ಮೇಲೆ ಕಪ್ಪು ಬಣ್ಣವನ್ನು ಹೊಂದಿದ್ದು, ಕೆಳ ಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುವ ಈ ಹಾವು ಕಚ್ಚಿದರೆ ಸಾಯೋದು ಕಡಿಮೆ. ಆದರೆ, ದೇಹಕ್ಕೆ ನಾನಾ ಸಮಸ್ಯೆ ಒಡ್ಡುತ್ತೆ ಎಂದು ಹೇಳಲಾಗುತ್ತಿದೆ.

ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರೋದು ಕಡಿಮೆ. ಅಲ್ಲದೆ ಪಶ್ಚಿಮಘಟ್ಟಗಳ ಭಾಗದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಈ ಹಾವು ಕಳಸದ ಉರಗ ತಜ್ಞ ರಿಜ್ವಾನ್‌ ಅವರ ಮನೆ ಅಂಗಳದಲ್ಲಿ ಕಾಣಿಸಿಕೊಂಡಿದ್ದು ರಿಜ್ವಾನ್‌ ಅದನ್ನು ರಕ್ಷಿಸಿದ್ದಾರೆ.

Leave a Comment