ಭದ್ರಾವತಿ : ಇಲ್ಲಿನ ಹೊಸಮನೆ ಠಾಣಾ ವ್ಯಾಪ್ತಿಯ ಸಾಯಿನಗರದಲ್ಲಿ ಶುಕ್ರವಾರ ಚೂರಿ ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕೋಡಿಹಳ್ಳಿ ನಿವಾಸಿ ನವೀನ್ ಕುಮಾರ್ (25) ಮೃತ ದುರ್ಧೈವಿ. ಚೂರಿಯಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳ ಗುಂಪು ಪರಾರಿಯಾಗಿದೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾನೆ.
ಸಾದತ್, ಸುಹೇಲ್ ಅಲಿಯಾಸ್ ಕೊಲವೇರಿ ಹಾಗೂ ಸಹಚರರು ಆರೋಪಿಗಳಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮೃತ ಯುವಕನಿಗೆ ಒಂದು ವರ್ಷದ ಮಗುವಿದೆ.
ಗಾರೆ ಕೆಲಸ ಮಾಡಿಕೊಂಡಿದ್ದ ನವೀನ್ ಕುಮಾರ್, ಈ ಹಿಂದೆ ಎರಡು ಗಾಂಜಾ ಕೇಸ್‌ನಲ್ಲಿ ಆರೋಪಿಯಾಗಿದ್ದ. ಸದಾತ್ ಎಂಬುವನ ಹತ್ತಿರ ಮೊಬೈಲ್ ಅಡವಿಟ್ಟಿದ್ದ ಈತ, ಗೆಳೆಯ ಅರುಣ್ ಕುಮಾರ್ ಜತೆಯಲ್ಲಿ ಮೊಬೈಲ್ ಬಿಡಿಸಿಕೊಳ್ಳಲು ಸತ್ಯಸಾಯಿ ನಗರಕ್ಕೆ ಹೋಗಿದ್ದಾಗ ಗಲಾಟೆ ನಡೆದಿದೆ.
ಸಾದತ್, ಸುಹೇಲ್ ಅಲಿಯಾಸ್ ಕೊಲವೇರಿ ಹಾಗೂ ಸಹಚರರು ಚೂರಿಯಿಂದ ನವೀನ್ ಕುಮಾರ್ ಬೆನ್ನಿಗೆ ಎರಡು ಕಡೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ನವೀನ್ ಕುಮಾರ್ ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಬಂದು ನೋಡಿದಾಗ ನವೀನ್ ರಕ್ತದ ಮಡುವಿನಲ್ಲಿ ಬಿದಿದ್ದ. ಹೀಗಾಗಿ ಗಾಯಾಳುವನ್ನು ಬೈಕ್‌ನಲ್ಲಿ ಆತನನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಅನ್ಯಕೋಮಿನ ಯುವಕರಿಂದ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆ ಬಳಿ ನೂರಾರು ಹಿಂದು ಯುವಕರು ಜಮಾಯಿಸಿದ್ದಾರೆ. ಆಸ್ಪತ್ರೆಗೆ ಬಿಜೆಪಿ ಅಭ್ಯರ್ಥಿ ರುದ್ರೇಶ್ ಮಂಗೋಟೆ ಭೇಟಿ ನೀಡಿ ಪರಿಶೀಲಿಸಿ, ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.