ತುಂಗಾ ಅಡಿಕೆ ಸೌಹಾರ್ದ ಸಹಕಾರಿಗೆ ಅಧ್ಯಕ್ಷರಾಗಿ ಡಿ.ಆರ್. ವಿನಯ್ ಕುಮಾರ್‌ ಅವಿರೋಧ ಆಯ್ಕೆ

0 48


ಹೊಸನಗರ : ಸಹಕಾರಿ ಧುರೀಣ ಆರ್.ಎಂ ಮಂಜುನಾಥ ಗೌಡ ರವರ ಪರಿಶ್ರಮದ ಫಲವಾಗಿ ಸಣ್ಣ ಪ್ರಮಾಣದಲ್ಲಿ ಕಳೆದ ಐದು ವರ್ಷಗಳ ಹಿಂದೆ ಆರಂಭಗೊಂಡ ತುಂಗಾ ಅಡಿಕೆ ಸೌಹಾರ್ದ ಸಹಕಾರಿ ಸಂಸ್ಥೆ ಆಡಳಿತ ಮಂಡಳಿ ಪರಿಶ್ರಮದ ಫಲವಾಗಿ ಇಂದು ಗಣನೀಯ ಪ್ರಗತಿ ಕಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ.ಆರ್.ವಿನಯ್ ಕುಮಾರ್ ಹೇಳಿದರು.


ಅವರು ಎಪಿಎಂಸಿ ಆವರಣದಲ್ಲಿ ಶುಕ್ರವಾರ ಸಂಸ್ಥೆಗೆ ಎರಡನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಗೊಂಡ ಬಳಿಕ ಮಾತನಾಡಿ, ಅಡಿಕೆ ಮಾರಾಟದಲ್ಲಿ ಸಂಸ್ಥೆ ಪ್ರತಿ ವರ್ಷ ಏರಿಕೆ ಕಾಣುತ್ತಿದೆ. ನಷ್ಟದಲ್ಲಿದ್ದ ಸಂಸ್ಥೆಯು ಕಳೆದ 2 ವರ್ಷಗಳಿಂದ ಲಾಭದತ್ತ ಮುಖ ಮಾಡಿದೆ. 2018ರಲ್ಲಿ 215 ಸದಸ್ಯರೊಂದಿಗೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1113 ಮಂದಿ ಸದಸ್ಯರಿದ್ದಾರೆ. ಕಳೆದ ಸಾಲಿನಲ್ಲಿ 7212 ಮೂಟೆ ಅಡಿಕೆ ಖರೀದಿಸಲಾಗಿದೆ 11.29 ಕೋಟಿ ರೂ. ರೈತರಿಗೆ ಸಾಲ ನೀಡಲಾಗಿದೆ. ರೂ.5.66 ಕೋಟಿ ರೂ. ಠೇವಣಿ ಸಂಗ್ರಹದ ಗುರಿ ತಲುಪಿದ್ದೇವೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ಹೊರತು ಪಡಿಸಿ ಉಳಿದ 6 ತಾಲ್ಲೂಕುಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿದೆ. ಸಹಕಾರಿ ಧುರೀಣ ಆರ್.ಎಂ.ಮಂಜುನಾಥಗೌಡ ಅವರ ಮಾರ್ಗದರ್ಶನ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.


ಸಂಸ್ಥೆಯು ಈ ಹಂಗಾಮಿನಲ್ಲಿ 20 ಸಾವಿರ ಮೂಟೆ ಅಡಿಕೆ ಆವಕಕ್ಕೆ ಗುರಿ ಹೊಂದಿದೆ. ಎಲ್ಲಾ ನಿರ್ದೇಶಕರೂ ಸಹಕಾರ ನೀಡಿದಲ್ಲಿ ಇದನ್ನು ಸಾಧಿಸುವುದು ಕಷ್ಟವೇನು ಅಲ್ಲ ಇದರ ಜೊತೆಗೆ ಸದಸ್ಯರು ಠೇವಣಿ ಇಡುವ ಅವಕಾಶ ಪಡೆದಿದ್ದು ಉತ್ತಮ ಬಡ್ಡಿ ನೀಡಲಾಗುವುದು ನಮ್ಮ ಸಹಕಾರಿ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರಿಗೂ ಸಹಾಯ ಹಸ್ತ ನೀಡುವುದರ ಮೂಲಕ ನಮ್ಮ ಸಂಸ್ಥೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಲು ಸಹಕರಿಸಬೇಕೆಂದು ಈ ಮೂಲಕ ಕೇಳಿಕೊಂಡರು.


ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡ ಮಾಲತೇಶ್ ಮಾತನಾಡಿ, ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಇಂದು ಸಂಸ್ಥೆಯು ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ. ಅಡಿಕೆ ಬೆಳೆಗಾರರ ಹಿತಕಾಯ್ದುಕೊಂಡು ಸಂಸ್ಥೆಯನ್ನು ಇನ್ನಷ್ಟು ಬೆಳೆಸುವುದು ನೂತನ ಆಡಳಿತ ಮಂಡಳಿಯ ಗುರಿಯಾಗಿದೆ ಎಂದರು.


ನಿರ್ದೇಶಕರಾದ ಎಚ್.ಸಿ.ನವೀನ್, ಜಯದೇವಪ್ಪ, ದಿನೇಶ್, ವೀರಮ್ಮ, ಹೇಮ, ಜಿ.ಎಸ್.ರವಿ, ಲೇಖನಮೂರ್ತಿ, ಮಹೇಶ್, ಸುಧೀರ್, ನಾಗೇಶ್, ಬಷೀರ್‌ಅಹಮದ್, ವಿನಾಯಕ, ನಾನ್ಯಾ ನಾಯ್ಕ್, ಕೆ.ಎಸ್ ಶಿವಪ್ಪ, ಸಂಸ್ಥೆಯ ವ್ಯವಸ್ಥಾಪಕರಾದ ಕುಮಾರಸ್ವಾಮಿ, ದಿನೇಶ, ಸಚಿನ್, ಮಲ್ಲಿಕಾರ್ಜುನ, ಪ್ರಮುಖರಾದ ಮಲ್ಲಿಕ, ಜಯರಾಂ, ಹಾಲಪ್ಪಗೌಡ, ಮಿಲ್ ಈಶ್ವರಪ್ಪ ಗೌಡ, ಮುರುಳಿಧರ, ಜಿ.ಟಿ ಈಶ್ವರಪ್ಪ ಗೌಡ, ಎಂ.ಎನ್ ಸುಧಾಕರ್, ಬಾವಿಕಟ್ಟೆ ಸತೀಶ, ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕರಾದ ಮಂಜಪ್ಪ, ದಿವಾಕರ ಶೆಟ್ಟಿ ಇನ್ನೂ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!