ಧರ್ಮಸಾಮರಸ್ಯ, ಸ್ವಾವಲಂಬನೆ, ಕರ್ತವ್ಯ ತತ್ಫರತೆಯಿಂದ ಭಾರತ ರಾಷ್ಟ್ರದ ಔನತ್ಯ ಶತಃಸಿದ್ಧ | ಹೊಂಬುಜ ಶ್ರೀಗಳು

0 246

ರಿಪ್ಪನ್‌ಪೇಟೆ : ಪ್ರತಿಯೋರ್ವರೂ ಭಾರತದ ಸಂವಿಧಾನದ ಪರಿವ್ಯಾಪ್ತಿಯಲ್ಲಿ ರಾಷ್ಟ್ರದ ಭಾವೈಕ್ಯತೆ, ಸಮಗ್ರತೆಯನ್ನು ಗೌರವಯುತವಾಗಿ ಸಂರಕ್ಷಿಸಬೇಕು. ಪ್ರಜಾಪ್ರಭುತ್ವವು ರಾಷ್ಟ್ರದ ಆಡಳಿತ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೇ ಧರ್ಮ ಸಹಿಷ್ಣುತೆ, ಅಹಿಂಸಾತ್ಮಕ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಲು ದಾರಿದೀಪವಾಗಿದೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶುಭ ಸಂದೇಶ ನೀಡಿದರು.

ದೇಶದ ಸಮಗ್ರತೆ, ಸಶಕ್ತ ಭಾರತೀಯರೆಲ್ಲರ ಆರೋಗ್ಯದಾಯಕ ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ಔದ್ಯೋಗಿಕ ಕ್ಷೇತ್ರ ನವಮನ್ವಂತರದಲ್ಲಿ ಉದ್ದೀಪನಗೊಳ್ಳಲಿ ಎಂದು ಆಶಿಸಿದರು.

ಗಣತಂತ್ರವು ಭಾರತೀಯ ಸನಾತನ ಧರ್ಮ ಜೈನರ ಕೊಡುಗೆ. 24ನೇ ತೀರ್ಥಂಕರ ಶ್ರೀ ಮಹಾವೀರ ಸ್ವಾಮಿಯವರು ದೇಶದೆಲ್ಲೆಡೆ ಗಣತಂತ್ರದ ಮೂಲ ಪುರುಷರೆಂದು ದಾಖಲಾಗಿದ್ದು, ಗ್ರಾಮ ಸ್ವರಾಜ್ಯ, ಆಡಳಿತ ವಿಕೇಂದ್ರಿಕರಣದ ಫಲವು ಅಸಮಾನತೆ, ಸಂಘರ್ಷ ನಿವಾರಿಸುತ್ತದೆ ಎಂಬ ಉಲ್ಲೇಖವನ್ನು ಶ್ರೀಗಳವರು ವಿವರಿಸಿದರು.

ಹುಂಚ ಪರಂಜ್ಯೋತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಧ್ವಜಾರೋಹಣ, ವಿದ್ಯಾರ್ಥಿಗಳ ಸಾಮೂಹಗಾನ ಜರುಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾವತಿ, ಶಿಕ್ಷಕಿಯರು ಇದ್ದರು.

Leave A Reply

Your email address will not be published.

error: Content is protected !!