ಮೀಸಲಾತಿಗಾಗಿ ಆಗ್ರಹಿಸಿ ನಾಳೆ ಪಂಚಮಸಾಲಿಗಳಿಂದ ‘ನಮ್ಮ ನಡಿಗೆ ಶಿವಮೊಗ್ಗ ಕಡೆಗೆ’

0 211

ರಿಪ್ಪನ್‌ಪೇಟೆ: ಈ ಹಿಂದಿನ ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರದಲ್ಲಿದ ಸಂದರ್ಭದಲ್ಲಿ ಪಂಚಮಸಾಲಿ ಲಿಂಗಾಯುತರ ಹೋರಾಟಕ್ಕೆ ಮಣಿದು 2ಎ ಮೀಸಲಾತಿ ಘೋಷಿಸಲಾಗಿದ್ದು ಅದನ್ನು ಸಮರ್ಪಕವಾಗಿ ಅನುಷ್ಟಾನ ಮಾಡದೇ ಈವರೆಗೂ ನಮ್ಮ ಮಕ್ಕಳಿಗೆ 2ಎ ಮೀಸಲಾತಿ ಪತ್ರ ಕೈಗೆ ಸಿಗದೇ ವಂಚಿತರನ್ನಾಗಿಸಿದೆ. ಇಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚಮಸಾಲಿ ಲಿಂಗಾಯುತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಶಿಫಾರಸ್ಸು ಮಾಡುವುದು ಮತ್ತು 2ಎ ಮೀಸಲಾತಿಯನ್ನು ಪ್ರಕಟಿಸಬೇಕು ಎಂಬ ಹಕ್ಕೊತ್ತಾಯವನ್ನು ಮಾಡುವ ಉದ್ದೇಶದಿಂದ ಫೆಬ್ರವರಿ 14 ರಂದು ನಮ್ಮ ನಡಿಗೆ ಶಿವಮೊಗ್ಗದ ಕಡೆಗೆ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಲಿಂಗಪೂಜೆ ಮಾಡುವುದರೊಂದಿಗೆ ರಸ್ತೆ ತಡೆ ನಡೆಸುವುದಾಗಿ ಕೂಡಲ ಸಂಗಮ ಪಂಚಮಸಾಲಿ ಲಿಂಗಾಯುತ ಪೀಠದ ಜಗದ್ಗುರು ಜಯಬಸವ ಮೃತ್ತುಂಜಯ ಸ್ವಾಮೀಜಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ರಿಪ್ಪನ್‌ಪೇಟೆಯ ಹೆಚ್.ಎಂ.ವರ್ತೇಶ್‌ಗೌಡ ಮತ್ತು ಕೋಡೂರು ಗ್ರಾಮದ ಚಂದ್ರಮೌಳಿಗೌಡರ ಮನೆಯಲ್ಲಿ ಪಂಚಮಸಾಲಿ ಲಿಂಗಾಯಿತ ಉಪಪಂಗಡದ ಮಲೆನಾಡಿನ ಮಲ್ಲೇಗೌಡರ ಸಮಾಜದವರೊಂದಿಗೆ ಸಮಾಲೋಚನೆ ನಡೆಸಿ ಸಮಾಜದ ಸಂಘಟನೆಗೆ ತಾವುಗಳು ಸದಾ ಸಿದ್ದರಾಗುವಂತೆ ಕರೆಕೊಡುವ ಮೂಲಕ ಸರ್ಕಾರದ ವಿರುದ್ಧ ಯಾವುದೇ ಹೋರಾಟ ನಡೆಸಲು ಸನ್ನದ್ದರಾಗಬೇಕು ಮತ್ತು ನಾವು ಯಾವುದೇ ಸರ್ಕಾರದ ವಿರುದ್ದ ಹೋರಾಟ ಮಾಡದೇ ನಮ್ಮ ಹಕ್ಕು ಕೇಳಿ ಈಡೇರಿಸುವಂತೆ ಒತ್ತಾಯಿಸಲು ಈ ಹೋರಾಟವೆಂದರು.

ಪಂಚಮಸಾಲಿ ಲಿಂಗಾಯಿತ ಹೋರಾಟ ವೇದಿಕೆಯ ಸಾಗರ ತಾಲ್ಲೂಕು ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.
ಕೋಡೂರು ಗ್ರಾಮದ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಬಿ.ಜಿ. ಚಂದ್ರಮೌಳಿಗೌಡ, ವೇದಾಂತಪ್ಪಗೌಡ, ಈಶ್ವರಪ್ಪಗೌಡ ವಸವೆ, ಚನ್ನಬಸಪ್ಪಗೌಡ ಬ್ರಹ್ಮೇಶ್ವರ, ಹಾಲಪ್ಪಗೌಡ ಚಿಕ್ಕಮಣತಿ, ಶಿವಪ್ಪಗೌಡ, ವಿರೂಪಾಕ್ಷಪ್ಪಗೌಡ, ಜಯಶೀಲಗೌಡ ಹರತಾಳು, ಮಲ್ಲಿಕಾರ್ಜುನ,
ಗಣಪತಿಗೌಡ, ರಿಪ್ಪನ್‌ಪೇಟೆಯಲ್ಲಿ ಜಿ.ಎಂ.ದುಂಡರಾಜಗೌಡ, ಹೆಚ್.ಎಂ.ವರ್ತೇಶ್, ಜೆ.ಎಸ್. ಚಂದ್ರಪ್ಪಗೌಡ, ಡಿ.ಈ.ಮಧೂಸೂದನ್, ಡಿ.ಎಸ್.ರಾಜಾಶಂಕರ್ ಸಮಾಜದ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!