ಸ್ವಾಸ್ಥ್ಯ ಸಮಾಜದ ಚಿಂತನೆಗಾಗಿ ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಮಕ್ಕಳ ಪೋಷಕರನ್ನು ಮನವೊಲಿಸುವಂತೆ ಕರೆ

0 48

ಹೊಸನಗರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳವರ ರಾಮ ರಾಜ್ಯದ ಕನಸು ನನಸಾಗಲು ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಮಕ್ಕಳು ಪೋಷಕರನ್ನು ಮನವೊಲಿಸುವ ಯತ್ನ ಮಾಡಬೇಕೆಂದು ಲೇಖಕಿ ಸಾಹಿತಿ ಜಿಲ್ಲಾ ಜನಜಾಗೃತಿ ವೇದಿಕೆಯ ಶಶಿಕಲಾ ಮಕ್ಕಳಿಗೆ ಕರೆ ನೀಡಿದರು‌.

ಅವರು ಇಂದು ಪಟ್ಟಣದ ಮಲೆನಾಡು ಪ್ರೌಢ ಶಾಲೆಯಲ್ಲಿ ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಸಂಯುಕ್ತ ಆಶಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ, ತಂಬಾಕು ಉತ್ಪನ್ನಗಳಿಂದ ವಿವಿಧ ರೀತಿಯ ಕ್ಯಾನ್ಸರ್ ಕಾಯಿಲೆಗಳು ಮನುಷ್ಯರ ಅವನತಿಗೆ ಕಾರಣವಾಗುತ್ತಿದ್ದ ಸಲುವಾಗಿ ಅವುಗಳ ಉತ್ಪನ್ನಗಳ ಸೇವನೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವುದರ ಮೂಲಕ ಕ್ಯಾನ್ಸರ್ ಮುಕ್ತ ದೇಶವನ್ನಾಗಿಸಲು ಪಣತೊಡಬೇಕೆಂದು ಮಕ್ಕಳಿಗೆ ಪ್ರತಿಸಾಮಾನ್ಯ ಹತ್ತು ಜನರಲ್ಲಿ ಒಬ್ಬರಿಗೆ ಹೃದ್ರೋಗ ಉಂಟಾದರೆ ಇನ್ನೊಂದೆಡೆ ಪ್ರತಿ 10 ಧೂಮಪಾನಗಳಲ್ಲಿ ನಾಲ್ವರಿಗೆ ಎದೆ ರೋಗ ಉಂಟಾಗುತ್ತಿದೆ ಎಂದು ತಿಳಿಸಿದ ಅವರು, ಎಲ್ಲ ರೀತಿಯ ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೇಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಹಿರಿತನದಲ್ಲಿ ಧಾರ್ಮಿಕತೆಗೆ ಆರೋಗ್ಯಕ್ಕೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅವರ ರಾಮ ರಾಜ್ಯದ ಕನಸನ್ನು ನನಸು ಮಾಡುವ ಕಾರ್ಯದಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು‌.

ಈಗಾಗಲೇ ಶ್ರೀ ಹೆಗ್ಗಡೆ ಯವರು ಕೆರೆಗಳ ಪುನರುತ್ಥಾನ ದೇವಸ್ಥಾನ ಜೀರ್ಣೋದ್ಧಾರ ರುದ್ರಭೂಮಿಗಳ ನಿರ್ಮಾಣ ಮೊದಲಾದ ಸತ್ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಎಲ್ಲರ ಸೌಭಾಗ್ಯವೆಂದರು.

ಮಲೆನಾಡು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುಧಾಕರ ಅಧ್ಯಕ್ಷತೆ ವಹಿಸಿದ ಸಮಾರಂಭವನ್ನು ಹಿರಿಯ ಪತ್ರಕರ್ತ ಉಡುಪಿ ಎಸ್ ಸದಾನಂದರವರು ಉದ್ಘಾಟಿಸಿದರು

ಮೇಲ್ವಿಚಾರಕ ಸುಭಾಷ್ ಸ್ವಾಗತಿಸಿದರು ಸೇವಾ ಪ್ರತಿನಿಧಿ ಶೃತಿ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕ ಚಂದ್ರು ಅಭಾರ ಮನ್ನಿಸಿದರು

Leave A Reply

Your email address will not be published.

error: Content is protected !!