ಹೊಸನಗರ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ, ಲಿಂಗನಮಕ್ಕಿ ಡ್ಯಾಂನ ಇಂದಿನ ನೀರಿನ ಮಟ್ಟ ಎಷ್ಟು ಗೊತ್ತಾ ?

0 45

ಹೊಸನಗರ : ರಾಜ್ಯದ ಪ್ರಮುಖ ಜಲಾಶಯವಾದ ಲಿಂಗನಮಕ್ಕಿಗೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಪುಷ್ಯ ಮಳೆಯ ಆರ್ಭಟ ಮುಂದುವರೆಗಿದ್ದು ಜಲಾಶಯಕ್ಕೆ ಸುಮಾರು 4 ಅಡಿಗಳಷ್ಟು ನೀರು ಒಂದೇ ದಿನ ಸಂಗ್ರಹವಾಗಿದೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಜಲಾಶಯದ ನೀರಿನ ಮಟ್ಟ 1778.85 ಅಡಿ ತಲುಪಿದೆ. ಜಲಾಶಯಕ್ಕೆ 67317 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ ಜಲಾಶಯದ ನೀರಿನ ಮಟ್ಟ 1798.10 ಅಡಿ ದಾಖಲಾಗಿತ್ತು. ಜಲಾಶಯ 1819 ಅಡಿ ಗರಿಷ್ಠ ಮಟ್ಟ ಹೊಂದಿದೆ.

ಎಲ್ಲೆಲ್ಲಿ ಎಷ್ಟು ಮಳೆ :

ಇಂದು ಬೆಳಿಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಸಾವೇಹಕ್ಲುವಿನಲ್ಲಿ ಅತ್ಯಧಿಕ 230 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಹುಲಿಕಲ್ 221, ಮಾಣಿ 212, ಚಕ್ರಾನಗರ 210, ಮಾಸ್ತಿಕಟ್ಟೆ 207, ಯಡೂರು 170, ಕಾರ್ಗಲ್ (ಸಾಗರ) 139, ಹೊಸನಗರ 126, ರಿಪ್ಪನ್‌ಪೇಟೆ 59 ಮತ್ತು ಅರಸಾಳುವಿನಲ್ಲಿ 52 ಮಿಲಿ ಮೀಟರ್ ಮಳೆ ಬಿದ್ದಿದೆ.

Leave A Reply

Your email address will not be published.

error: Content is protected !!