ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆ

0 6


ಶಿವಮೊಗ್ಗ : 2023 ರ ಕರ್ನಾಟಕ ವಿಧಾನ ಸಭಾ ಚುನಾವಣೆಯ ಶಿವಮೊಗ್ಗ ವಿಧಾನಸಭಾ ಕ್ಷೇತ್ರ-113 ರ ನಾಮನಿರ್ದೇಶನ ಪತ್ರಗಳನ್ನು ಅಭ್ಯರ್ಥಿ ಅಥವಾ ಆತನ ಯಾರೇ ಪ್ರಸ್ತಾಪಕಾರನು ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ದಿ: 13-04-2023 ರ ಬೆಳಗ್ಗೆ 11 ಗಂಟೆಯಿಂದ ಮಾಧ್ಯಾಹ್ನ 03 ಗಂಟೆಯ ನಡುವೆ ಯಾವುದೇ ದಿನದಂದು (ಸಾರ್ವತ್ರಿಕ ರಜೆ ಹೊರತುಪಡಿಸಿ) ದಿ: 20-04-2023 ಕ್ಕಿಂತ ಮುಂಚಿತವಾಗಿ ಚುನಾವಣಾ ಅಧಿಕಾರಿಗೆ (ಸಹಾಯಕ ಕಾರ್ಯಪಾಲಕ ಅಭಿಯಂತರರು, ಶಿವಮೊಗ್ಗ ಮಹಾನಗರಪಾಲಿಕೆ, ಶಿವಮೊಗ್ಗ) ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಹುದು.


ನಾಮನಿರ್ದೇಶನ ಪತ್ರಗಳನ್ನು ದಿನಾಂಕ: 21-04-2023 ರ ಬೆಳಗ್ಗೆ 11 ಗಂಟೆಯಂದು ಪರಿಷತ್ ಸಭಾಂಗಣ, ಶಿವಮೊಗ್ಗ ಮಹಾನಗರ ಪಾಲಿಕೆ ಇಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.


ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ಸೂಚನೆಯನ್ನು ಏ.24 ರಂದು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳಿಗೆ ಕಚೇರಿಯಲ್ಲಿ ಮಧ್ಯಾಹ್ನ 03 ಗಂಟೆಗೆ ಮುಂಚಿತವಾಗಿ ಅಭ್ಯರ್ಥಿಯು ಲಿಲಖಿತದಲ್ಲಿ ಅಧಿಕೃತಗೊಳಿಸಿದ ತನ್ನ ಪ್ರಸ್ತಾವಕಾರ ಅಥವಾ ಚುನಾವಣಾ ಏಜೆಂಟರ ಮೂಲಕ ಕಳುಹಿಸಬಹುದು.


ಮತದಾನವನ್ನು ಮೇ 10 ರಂದು ಬೆಳಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯ ನಡುವಿನ ಅವಧಿಯಲ್ಲಿ ಕೈಗೊಳ್ಳಲಾಗುತ್ತದೆಂದು 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ಹೆಚ್.ಎನ್ ಚಂದ್ರಕುಮಾರ್ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!