ಅ.14, 15ರಂದು ಶಿವಮೊಗ್ಗದಲ್ಲಿ ಕನ್ಯಾದಾನ

0 285


ಶಿವಮೊಗ್ಗ: ಶಿವಮೊಗ್ಗದ ಹೆಸರಾಂತ ಸಹ್ಯಾದ್ರಿ ರಂಗತರಂಗ ತಂಡವು ಕನ್ಯಾದಾನ ನಾಟಕ ಪ್ರದರ್ಶನ ಮಾಡಲಿದೆ. ನಾಟಕ ಅ. 14, 15ರಂದು ಡಿವಿಎಸ್ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.
ಆಪ್ತರಂಗ ಸಜ್ಜಿಕೆಯಲ್ಲಿ ಪ್ರದರ್ಶನಗೊಳ್ಳಲಿರುವ ಈ ನಾಟಕಕ್ಕೆ ಉಚಿತ ಪ್ರವೇಶವಿದೆ. ಆದರೆ ಪಾಸ್ ಕಡ್ಡಾಯವಾಗಿದೆ. ಪಾಸ್‌ಗಳಿಗಾಗಿ ಸಂಪರ್ಕಿಸಿ: +91 94499 25746
ವಿಜಯ ದೋಂಡೋಪಂತ್ ತೆಂಡೂಲ್ಕರ್ ಖ್ಯಾತ ಮರಾಠಿ ಚಿಂತಕ, ನಾಟಕಕಾರನ  ಕೃತಿ ಕನ್ಯಾದಾನವಾಗಿದ್ದು, ತೆಂಡೂಲ್ಕರರ ನಾಟಕಗಳು ಸಮಾಜದ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಕಾರಣಕ್ಕಾಗಿ ಅನೇಕ ಚರ್ಚೆಗಳಿಗೆ ಅವಕಾಶ ನೀಡುತ್ತವೆ. 1983ರಲ್ಲಿ ಪ್ರಕಟವಾದ ‘ಕನ್ಯಾದಾನ’ ಗಂಡು ಹೆಣ್ಣಿನ ಸಂಬಂಧ ಹಾಗು ಭಾರತೀಯ ಸಮಾಜದ ಜಾತಿ ಪದ್ಧತಿ ಬಗ್ಗೆ ವಿಶೇಷ ಬೆಳಕು ಚೆಲ್ಲುವಂತದ್ದಾಗಿದೆ.


ನಾಟಕದ ನಿರ್ದೇಶವನ್ನು ನಮ್ಮ ನಡುವೆ ಇರುವ ಹಾಲಸ್ವಾಮಿ ಆರ್. ಎಸ್. ಮಾಡಿದ್ದು, ಇವರು
ಸಮಾಜ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಮೂರು ದಶಕಗಳಿಂದ ಶಿವಮೊಗ್ಗ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಇವರ ನಿರ್ದೇಶನದ ಪ್ರಮುಖ ನಾಟಕಗಳೆಂದರೆ ಗಾಂಧಿ ವರ್ಸಸ್ ಗೋಡ್ಸೆ, ದ್ವಂದ್ವ ದ್ವಾಪರ, ಯಾಪಿಲ್ಲು, ಕುದುರೆ ಮೊಟ್ಟೆ. ನೀರೆಲ್ಲವೂ ತೀರ್ಥ(ಕುವೆಂಪು ನಾಟಕಗಳ ಕೊಲಾಜ್). ಇದಲ್ಲದೇ ಗಂಗಾಲಹರಿ ಹಾಗೂ ಓ. ಲಕ್ಷ್ಮಣ, ಹೆಳವನಕಟ್ಟೆ ಗಿರಿಯಮ್ಮ ನಾಟಕಗಳಿಗೆ ಸಹ ನಿರ್ದೇಶನ ಮಾಡಿದ್ದಾರೆ.


ಕನ್ಯಾದಾನ ನಾಟಕ ಪಾತ್ರವರ್ಗದಲ್ಲಿ ಡಾ. ಎಚ್.ಎಸ್. ನಾಗಭೂಷಣ, ಮಧುರ ಬಿ.ಎಸ್., ಚೇತನ್ ಯನಹಳ್ಳಿ, ದೀಪಿಕ ಎಸ್., ಅರ್ಜುನ್ ಎಂ., ಶ್ರೀಕಂಠಪ್ರಸಾದ್, ಶ್ರೀನಿಧಿ ದೇಶಪಾಂಡೆ, ನಿರ್ಮಾಣ ನಿರ್ವಹಣೆ- ಶಂಕರ್ ಬೆಳಲಕಟ್ಟೆ, ಸಂಗೀತ: ರವಿ ಶಂಕರ್ ಹಚ್.ಕೆ., ಮೃದಂಗ: ಕೃಷ್ಣಮೂರ್ತಿ, ಬೆಳಕು: ಮಂಜುನಾಥ ಕೂದುವಳ್ಳಿ (ಮಂಕು) ಇದ್ದಾರೆ.

Leave A Reply

Your email address will not be published.

error: Content is protected !!