ಕೈದೋಟದ ಮಹತ್ವ ತಿಳಿಸಿದ ಕೃಷಿ ವಿವಿ ವಿದ್ಯಾರ್ಥಿಗಳು

0 301

ಹೊಸನಗರ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ಬಿ. ಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರವನ್ನು ಆರಂಭಿಸಲಾಗಿದ್ದು, ಗುರುವಾರದಂದು ನವಗ್ರಹ ತಂಡದವರು ಮಾರುತಿಪುರದ ಕೃಷಿ ಮಾಹಿತಿ ಕೇಂದ್ರದ ಮುಂದೆ ಕೈದೋಟ ಸಿದ್ಧಪಡಿಸುವ ವಿಧಾನ ಪ್ರದರ್ಶನವನ್ನು ಏರ್ಪಡಿಸಿದ್ದರು.

ಈ ಕೈದೋಟವನ್ನು ವಿದ್ಯಾರ್ಥಿಗಳೇ ಬಹಳ ಶ್ರಮಪಟ್ಟು ಸಿದ್ಧಪಡಿಸಿದ್ದು, ಅವರ ಕೆಲಸದ ಶೈಲಿಯನ್ನು ನೋಡಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವನ್ನು ಇರುವಕ್ಕಿ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕಿಯಾದ ಡಾ.ದಿವ್ಯಾ ಬೀಜ ಬಿತ್ತನೆ ಮಾಡುವ ಮೂಲಕ ಆರಂಭ ಮಾಡಿದರು.
ಈ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರಾದ ಚಂದ್ರಶೇಕರ್ ಹಾಗೂ ವಿದ್ಯಾ ಅವರು ಬಿತ್ತನೆ ಮಾಡಿ ಶುಭಕೋರಿದರು.


ನೆರೆದಿದ್ದ ಜನರಲ್ಲಿ ಕೈದೋಟದ ಮಹತ್ವವನ್ನು ತಿಳಿಸಿ ಅದರಿಂದ ಮನೆಗೆ ಬೇಕಾಗುವ ತರಕಾರಿಯನ್ನು ತಾವೇ ಸಾವಯವ ರೀತಿಯಲ್ಲೇ ಹೇಗೆ ಬೆಳೆಯಬಹುದು ಎಂದು ಹಾಗೂ ಇದರಿಂದ ಆರ್ಥಿಕತೆಗೆ ಹೀಗೆ ಸಹಾಯವಾಗುತ್ತದೆ ಎಂದು ತಿಳಿಸಿಕೊಡಲಾಯಿತು.
ಕೊತ್ತಂಬರಿ, ಪಾಲಕ್, ಮೂಲಂಗಿ, ಕ್ಯಾರೆಟ್, ಮೆಂತ್ಯಾ ಮುಂತಾದ ತರಕಾರಿಯನ್ನು ಬಿತ್ತನೆ ಮಾಡಿದರು.

Leave A Reply

Your email address will not be published.

error: Content is protected !!