ಕೋಡೂರು ಗ್ರಾಪಂ ಪಿಡಿಒ ನಾಗರಾಜ್ ರವರಿಗೆ ಪಿತೃ ವಿಯೋಗ

0 828

ಹೊಸನಗರ: ಕೋಡೂರು ಪಿಡಿಒ ನಾಗರಾಜ್ ರವರ ತಂದೆ ಇಲ್ಲಿನ ಕ್ರಿಶ್ಚಿಯನ್ ಕಾಲೋನಿ ವಾಸಿ ಸೀನ ಪೂಜಾರಿ (72) ಹೃದಯಾಘಾತದಿಂದ ತಮ್ಮ ಸ್ವಂತ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದರು.

ಪಿಡಿಒ ನಾಗರಾಜ್‌ರವರು ಸೇರಿ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

ಸಂತಾಪ:

ಸೀನ ಪೂಜಾರಿ ನಿಧನಕ್ಕೆ ಕೋಡೂರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಸಿಬ್ಬಂದಿಗಳು, ಹೊಸನಗರ ಕಾಡುವಳ್ಳಿ ಮೆಡಿಕಲ್ಸ್ ಮಾಲೀಕ ವಿನಯ್, ಅಶೋಕ ರೈಸ್ ಮಿಲ್ ಮಾಲೀಕ ಈಶ್ವರ ಗೌಡ, ಜಿ.ಟಿ ಈಶ್ವರ ಗೌಡ, ಗುತ್ತಿಗೆದಾರರಾದ ಮಹಾಬಲ ಹೆಚ್, ದಿವಾಕರ್ ಶೆಟ್ಟಿ ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Leave A Reply

Your email address will not be published.

error: Content is protected !!