ಚಂದ್ರಗುತ್ತಿ ; ಅಂಗಡಿ ಮಳಿಗೆಗಳ ಬಹಿರಂಗ ಹರಾಜು

0 234

ಸೊರಬ : ಶ್ರೀ ರೇಣುಕಾಂಬ ದೇವಸ್ಥಾನದ ರಥ ಬೀದಿಯಲ್ಲಿರುವ 22 ಅಂಗಡಿ ಮಳಿಗೆಗಳನ್ನು ಶ್ರೀ ರೇಣುಕಾಂಬ ದೇವಸ್ಥಾನದ ಆಡಳಿತ ಕಛೇರಿ ಆವರಣದಲ್ಲಿ ಗುರುವಾರದಂದು ಬಹಿರಂಗ ಹರಾಜು ನಡೆಸಲಾಯಿತು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಅವರ ಸಮ್ಮುಖದಲ್ಲಿ 22 ಅಂಗಡಿ ಮಳಿಗೆಗಳನ್ನು 11 ತಿಂಗಳುಗಳ ಅವಧಿಗೆ ಸೀಮಿತವಾಗಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.

ಈ ಬಾರಿ 22 ಅಂಗಡಿ ಮಳಿಗೆಗಳಿಂದ ಒಟ್ಟು 22,21,000 ರೂ. ಆದಾಯ ಸಂಗ್ರವಾಗಿದೆ. ಕಳೆದ 2023 ರಲ್ಲಿ ಮಳಿಗೆಗಳನ್ನು ಹರಾಜು ಮಾಡಿದಾಗ 21,61,000 ರೂ. ಸಂಗ್ರಹವಾಗಿತ್ತು.

ಮಳಿಗೆಗಳನ್ನು ಹಿಡಿದವರು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ, ಧಾರ್ಮಿಕ ದತ್ತಿ ಇಲಾಖೆಯ ನಿಯಮಾನುಸಾರವಾಗಿ ವ್ಯಾಪಾರ ವಹಿವಾಟುಗಳನ್ನು ನಡೆಸಬೇಕು, ಮಳಿಗೆಗಳನ್ನು ಹಿಡಿದವರು 7 ದಿನಗಳ ಒಳಗೆ ಹಣವನ್ನು ಪಾವತಿ ಮಾಡಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಸೂಚಿಸಿದರು,

ಮಳಿಗೆಗಳ ವ್ಯಾಪಾರಸ್ಥರು ಲಕ್ಷಾಂತರ ರೂ.ಗಳನ್ನು ಪಾವತಿ ಮಾಡಿ ಅಂಗಡಿ ಮಳಿಗೆಗಳನ್ನು ಹಿಡಿಯುತ್ತೀರಿ ಆದರೆ ರಥಬೀದಿಯ ರಸ್ತೆಯಲ್ಲಿ ಇತರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದೇ ಅಂಗಡಿಗಳನ್ನು ಇಟ್ಟು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಾರೆ. ಇದರಿಂದ ಮಳಿಗೆಗಳನ್ನು ಹರಾಜು ಹಿಡಿದಂತವರಿಗೆ ತುಂಬಾ ನಷ್ಟವಾಗುತ್ತಿದೆ. ರಸ್ತೆ ಅಕ್ಕಪಕ್ಕದಲ್ಲಿ ವ್ಯಾಪಾರ ವಹಿವಾಟುಗಳನ್ನು ಮಾಡದಂತೆ ಅಧಿಕಾರಿಗಳು ಸೂಚಿಸಬೇಕು ಎಂದು ಮಳಿಗೆ ಹರಾಜು ಹಿಡಿದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಹರಾಜು ಪ್ರಕ್ರಿಯೆಗೆ ಗ್ರಾಪಂ ಉಪಾಧ್ಯಕ್ಷ ಎಂ.ಬಿ ರೇಣುಕಾ ಪ್ರಸಾದ್, ಸದಸ್ಯ ರತ್ನಾಕರ್ ಎಂ.ಪಿ ಭೇಟಿ ನೀಡಿದರು.

ಹರಾಜು ಪ್ರಕ್ರಿಯೆಯಲ್ಲಿ ಗಣೇಶ್ ಮರಡಿ, ಲಕ್ಷ್ಮಣಪ್ಪ, ದ್ಯಾಮ, ಆನಂದ ಬಳೆಗಾರ, ಶ್ರೀನಿವಾಸ್ ಬಳೆಗಾರ, ಹನುಮಂತ, ಕೃಷ್ಣ, ಮಂಜು, ಶಾಂತ, ದೇವರಾಜ್ ಸೇರಿದಂತೆ ದೇವಸ್ಥಾನದ ನೌಕರರು, ಸಿಬ್ಬಂದಿಗಳು ಅಂಗಡಿ ವ್ಯಾಪಾರಸ್ಥರು, ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!