ಹೊಸನಗರ | ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ

0 635

ಹೊಸನಗರ: ಇಲ್ಲಿನ ಗಂಗನಕೊಪ್ಪ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಗಂಗಾಧರೇಶ್ವರ ದೇವರಿಗೆ ವಿಶೇಷ ರುದ್ರಾಭಿಷೇಕ, ಶ್ರೀರಾಮತಾರಕ ಹೋಮ ಹಾಗೂ ರಾಮಭಜನೆ ಕಾರ್ಯಕ್ರಮ ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಈ ಕಾರ್ಯಕ್ರಮದಲ್ಲಿ ಕರಸೇವಕರಿಗೆ ಗೌರವ ಸಮರ್ಪಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕಮವನ್ನು ಏರ್ಪಡಿಸಿದ್ದು ಸಾವಿರಾರು ಭಕ್ತರು ಆಗಮಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದರು‌.

ಸಂಜೆ 5ಗಂಟೆಗೆ ಉತ್ತರ ದಿಕ್ಕಿನಲ್ಲಿ ದೀಪ ಬೆಳಗುವ ಹಾಗೂ ಯಕ್ಷಗಾನ ಬಯಲಾಟವನ್ನು ಏರ್ಪಡಿಸಲಾಗಿದೆ.

ಸೀತಾರಾಮಚಂದ್ರ ಸಭಾಭವನದಲ್ಲಿ ರಾಮತಾರಕ ಹೋಮ, ಅನ್ನಸಂತರ್ಪಣೆ

ಇಲ್ಲಿನ ಸೀತಾರಾಮಚಂದ್ರ ಸಬಾಭವನದ ಆವರಣದಲ್ಲಿ 8 ದಿನಗಳಿಂದ ಸಂಜೆ 6 ಗಂಟೆಯಿಂದ ಗಂಗನಕೊಪ್ಪ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಭಜನೆ ಕಾರ್ಯಕ್ರಮ ನಡೆದಿದ್ದು ಇಂದು ಬೆಳಿಗ್ಗೆಯಿಂದ ಶ್ರೀರಾಮ ದೇವರಿಗೆ ವಿಶೇಷ ರುದ್ರಾಭಿಷೇಕ, ಶ್ರೀರಾಮತಾರಕ ಹೋಮ ಹಾಗೂ ರಾಮಭಜನೆ ಕಾರ್ಯಕ್ರಮ ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ಹೊಸನಗರ ತಾಲ್ಲೂಕು ಕೋಟೆಗಾರ್ ವಿದ್ಯಾವರ್ಧಕ ಸಮಗದ ಅಧ್ಯಕ್ಷ ಶಶಿಧರ್‌ನಾಯ್ಕ್ ದಂಪತಿಗಳು ಪೂಜಾ ಕಾರ್ಯಕ್ರಮ ನೇರವೇರಿಸಿದ್ದು ಸಂಘದ ಎಲ್ಲ ಪದಾಧಿಕಾರಿಗಳು ಸಂಘದ ನಿರ್ದೇಶಕರು ಹಾಗೂ ಬಿಜೆಪಿ ಹಿರಿಯ ಮುಖಂಡರುಗಳಾದ ಎನ್.ಆರ್. ದೇವಾನಂದ್, ಎ.ವಿ. ಮಲ್ಲಿಕಾರ್ಜುನ್ ಚಿಕ್ಕನಕೊಪ್ಪ ಶ್ರೀಧರ್ ಇನ್ನೂ ಮುಂತಾದವರು ಪೂಜಾ ಕಾರ್ಯದಲ್ಲಿ ಉಪಸ್ಥಿತರಿದ್ದರು.

ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕಮವನ್ನು ಏರ್ಪಡಿಸಿದ್ದು ಸಾವಿರಾರು ಭಕ್ತರು ಆಗಮಿಸಿ ಅನ್ನಪ್ರಸಾದವನ್ನು ಸೇವಿಸಿದರು.

ಗಣಪತಿ, ಪಾರ್ವತಿ, ಮಹೇಶ್ವರ ದೇವಸ್ಥಾನದ ಆವರಣದಲ್ಲಿ ರಾಮತಾರಕ ಹೋಮ ಅನ್ನಸಂತರ್ಪಣೆ

ಗಣಪತಿ, ಪಾರ್ವತಿ, ಮಹೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನ ಸಮಿತಿ ಹಾಗೂ ವಿಘ್ನೇಶ್ವರ ಸೇವಾ ಸಮಿತಿಯವರ ಹಾಗೂ ಸಾರ್ವಜನಿಕರೊಂದಿಗೆ ಆಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಭಜನೆ ಕಾರ್ಯಕ್ರಮ ನಡೆದಿದ್ದು ಇಂದು ಬೆಳಿಗ್ಗೆಯಿಂದ ಗಣಪತಿ, ಪಾರ್ವತಿ, ಮಹೇಶ್ವರ ದೇವರಿಗೆ ವಿಶೇಷ ರುದ್ರಾಭಿಷೇಕ, ಶ್ರೀರಾಮತಾರಕ ಹೋಮ ಹಾಗೂ ರಾಮಭಜನೆ ಕಾರ್ಯಕ್ರಮ ಏರ್ಪಡಿಸಿದ್ದರು.

ದೇವಸ್ಥಾನದ ಸಮಿತಿಯ ಸದಸ್ಯರು ಹಾಗೂ ದೇವರು ಭಕ್ತಾರು ಭಕ್ತಾ ಮಹಿಳೆಯರು ಹೊಸನಗರ ಪ್ರಮುಖ ಬೀದಿಗಳಲ್ಲಿ ರಾಮಭಜನೆ ಮಾಡುತ್ತಾ ಮೆರವಣಿಗೆ ನಡೆಸಿ ದೇವಸ್ಥಾನದ ಆವರಣದಲ್ಲಿ ಪೂಜೆ ಕಾರ್ಯದಲ್ಲಿ ಪಾಲ್ಗೊಂಡರು.

ಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕಮವನ್ನು ಏರ್ಪಡಿಸಿ ಸಾವಿರಾರು ಭಕ್ತರು. ಆಗಮಿಸಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು.

Leave A Reply

Your email address will not be published.

error: Content is protected !!