ದೇಶದಲ್ಲಿ ಪರಿಶುದ್ಧ ಗಾಳಿ ಹೊಂದಿರುವ ನಗರಗಳಲ್ಲಿ ಚಿಕ್ಕಮಗಳೂರು 2ನೇ ಸ್ಥಾನ ; ಶಿವಮೊಗ್ಗ ಎಷ್ಟನೇ ಸ್ಥಾನದಲ್ಲಿದೆ ?

0 794

ಚಿಕ್ಕಮಗಳೂರು/ಶಿವಮೊಗ್ಗ: ದೇಶದಲ್ಲಿ ಪರಿಶುದ್ಧ ಗಾಳಿ ಹೊಂದಿರುವ ನಗರಗಳ ಟಾಪ್-10 ಪಟ್ಟಿಯಲ್ಲಿ ಚಿಕ್ಕಮಗಳೂರು 2ನೇ ಸ್ಥಾನದಲ್ಲಿದ್ದರೇ ಆನಂತ್ರ ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ರಾಜ್ಯದ 8 ನಗರಗಳು ಸ್ಥಾನವನ್ನು ಪಡೆದುಕೊಂಡಿದ್ದಾವೆ.


ಈ ಸಂಬಂಧ ಪುಣೆಯ ರೆಸ್ಪಿರೇರ್ ಲಿವಿಂಗ್ ಸೈನ್ಸಸ್ ಅಂಡ್ ಕ್ಲೈಮೇಟ್ ಟ್ರೆಂಡ್ಸ್ ಸಂಸ್ಥೆಯು ಪ್ರಕಟಿಸಿದಂತ ವರದಿಯಿಂದ ತಿಳಿದು ಬಂದಿದೆ.

ಈ ಸಂಸ್ಥೆಯು ಒಂದು ವರ್ಷದ ಅವಧಿಯಲ್ಲಿ ದೇಶದ ನಾನಾ ನಗರಗಳಲ್ಲಿನ ಶುದ್ಧಗಾಳಿಯ ಸಾಂದ್ರತೆ ಬಗ್ಗೆ ಪರಿಶೀಲಿಸಿ ವರದಿ ಸಂಗ್ರಹಿಸಿದೆ.

ಕಳೆದ 2022ರ ಅಕ್ಟೋಬರ್ ನಿಂದ 2023ರ ಸೆಪ್ಟೆಂಬರ್ ವರೆಗೆ ಎಲ್ಲಾ ನಗರಗಳಲ್ಲಿ ಗಾಳಿಯ ಸಾಂದ್ರತೆ ಮತ್ತು ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ, ಗಾಳಿಯ ಗುಣಮಟ್ಟದ ಬಗ್ಗೆ ರೇಟಿಂಗ್ ನೀಡಿದೆ.

ಪರಿಶುದ್ಧ ಗಾಳಿ ಹೊಂದಿರುವ ನಗರಗಳಲ್ಲಿ ಮಿಜೋರಾಂನ ಐಜ್ವಾಲ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡರೇ, ಕರ್ನಾಟಕದ ಚಿಕ್ಕಮಗಳೂರು ಎರಡನೇ ಸ್ಥಾನವನ್ನು ಪಡೆದಿದೆ. ಹರಿಯಾಣದ ಮಂಡಿಖೇರಾ ಮೂರನೇ ಸ್ಥಾನ ಪಡೆದಿದೆ.

ಶುದ್ಧ ಗಾಳಿ ಹೊಂದಿರುವಂತ ರಾಜ್ಯದ 8 ನಗರಗಳ ಪಟ್ಟಿ :

1.ಚಿಕ್ಕಮಗಳೂರು- 2ನೇ ಸ್ಥಾನ.

2.ಚಾಮರಾಜನಗರ-4ನೇ ಸ್ಥಾನ

3.ಮಡಿಕೇರಿ-5ನೇ ಸ್ಥಾನ.

4.ವಿಜಯಪುರ-6ನೇ ಸ್ಥಾನ

5.ರಾಯಚೂರು-7ನೇ ಸ್ಥಾನ

6.ಶಿವಮೊಗ್ಗ-8ನೇ ಸ್ಥಾನ

7.ಗದಗ-9ನೇ ಸ್ಥಾನ

8.ಮೈಸೂರು-10ನೇ ಸ್ಥಾನ

Leave A Reply

Your email address will not be published.

error: Content is protected !!