ಬಿಹಾರಿ ಕೂಲಿ ಕಾರ್ಮಿಕರನ್ನು ಬಳಸಿ ಹರಿದ್ರಾವತಿ ನದಿ ಒಡಲು ಬಗೆದ ಮರಳು ದಂಧೆಕೋರರು, ಅಕ್ರಮ ತಡೆಗೆ ಗ್ರಾಮಸ್ಥರ ಆಗ್ರಹ

0 848

ಹೊಸನಗರ : ಹವಾಮಾನ ವೈಫರಿತ್ಯ ಕಾಣಲು ಪ್ರಕೃತಿ ಮೇಲೆ ನಡೆಯುತ್ತಿರುವ ನಿತ್ಯ ಹಲವು ಅನಾಚಾರಗಳೇ ಕಾರಣ ಆಗಿದೆ. ಮುಖ್ಯವಾಗಿ ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಅಹೋರಾತ್ರಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ದಂಧೆ ಮಾಫಿಯ ಎಂಬಂತೆ ಪರಿಣಿಮಿಸುತ್ತಿದೆ. ತಾಲೂಕಿನ ಶರಾವತಿ ನದಿಯ ಹಿನ್ನೀರ ಪ್ರದೇಶವಾದ ಈಚಲಕೊಪ್ಪ, ಹರಿದ್ರಾವತಿ, ಹಳೇ ಬಾಣಿಗ, ಮುತ್ತಲ ಸೇರಿದಂತೆ ವಿವಿಧೆಡೆ ನದಿಯ ಒಡಲನ್ನು ಬಗೆದು ಮರಳು ಸಂಗ್ರಹಿಸುವ ಕಾರ್ಯಕ್ಕೆ ಬಹುದೊಡ್ಡ ತಂಡವೊಂದು ಕಾರ್ಯೋನ್ಮುಖವಾಗಿದೆ.

ಉತ್ತರ ಭಾರತದ ಉಳುಗುತಜ್ಞರನ್ನು ಕರೆತಂದು ನದಿಯ ಆಳವಾದ ನೀರಿನಿಂದ ಮರಳನ್ನು ಮೇಲಕ್ಕೆತ್ತುವ ಕಾರ್ಯ ಭರದಿಂದ ಸಾಗಿದೆ. ಶರಾವತಿ ನದಿಯ ಉಪನದಿಗಳಲ್ಲಿ ಒಂದಾದ ಹರಿದ್ರಾವತಿ ನದಿಯ ಒಡಲನ್ನು ಸೀಳಿ, ಇಡೀ ನದಿ ಪಾತ್ರವನ್ನು ಬೃಹದಾಕಾರವನ್ನಾಗಿಸುವ ಕೆಲಸ ಅಕ್ರಮ ಮರಳು ಸಂಗ್ರಹಕಾರರ ತಂಡದಿಂದ ನಡೆದಿದೆ.

ಮುಂಜಾನೆ ಹೊತ್ತಿನಲ್ಲೆ ನದಿಯ ಆಳಕ್ಕಿಳಿದು ಮರಳನ್ನು ಮೇಲಕ್ಕೆತ್ತವ ಕೆಲಸಕ್ಕೆ ಮುಂದಾಗುವ ಈ ಬಿಹಾರಿ, ಉತ್ತರ ಪ್ರದೇಶದ ಕೂಲಿ ಕಾರ್ಮಿಕರು, ಸೂರ್ಯ ನೆತ್ತಿಗೇರುವ ಮೊದಲು ನಾಲ್ಕಾರು ಲೋಡಿನಷ್ಟು ಮರಳು ಸಂಗ್ರಹ ಮಾಡಿ ಅಲ್ಲಿಂದ ಕಾಲ್ಕಿಳುವುದು ಅವರಿಗೆ ಅಭ್ಯಾಸದಂದಾಗಿದೆ. ಆ ಭಾಗದ ಅರಣ್ಯ ಪ್ರದೇಶಗಳಲ್ಲಿ ಮರಳು ಸಂಗ್ರಹ ಮಾಡುವುದು, ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳ ಕೈಬಿಸಿ ಮಾಡಿ, ಸಂಜೆ ವೇಳೆಗೆ ಸಾಗರ, ಶಿಕಾರಿಪುರ, ಶಿವಮೊಗ್ಗ, ಸೊರಬ ಕಡೆಗೆ ಸಾಗಿಸುವುದು ಇವರಿಗೆ ನೀರು ಕುಡಿದಷ್ಟೇ ಸುಲಭವಾಗಿದೆ.

ಹೊಸನಗರ ತಾಲೂಕಿನ ಹರಿದ್ರಾವತಿ ನದಿಯ ಒಡಲು ಬಗೆದು ಅಕ್ರಮ ಮರಳು ಸಂಗ್ರಹಣೆಗೆ ಮುಂದಾಗಿರುವ ಬಿಹಾರಿಗಳ ತಂಡ.

ಬೇಸಿಗೆ ಸಮೀಪಿಸುತ್ತಿರುವ ಕಾರಣ ಸುತ್ತಲ ಕೃಷಿ ಚಟುವಟಿಕೆಗಳಿಗೆ ನೀರಿನ ಅಗತ್ಯ ಇರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಅಕ್ರಮ ಮರಳು ಸಂಗ್ರಹಣೆ ಹಾಗೂ ಸಾಗಾಣಿಕೆಗೆ ಸೂಕ್ತ ಕ್ರಮವಹಿಸ ಬೇಕೆಂಬುದು ಗ್ರಾಮಸ್ಥರ ಅಹವಾಲು ಆಗಿದೆ.

Leave A Reply

Your email address will not be published.

error: Content is protected !!