ಮಕ್ಕಳಲ್ಲಿ ಯಾವ ಪ್ರತಿಭೆ ಇದೆ ಎಂದು ತಂದೆ-ತಾಯಿ ಹುಡುಕಬೇಕು

0 486

ಹೊಸನಗರ : ಭಾರತೀಯರಲ್ಲಿ ಯಾರೂ ದಡ್ಡರಿಲ್ಲ ಆದರೆ ಮಕ್ಕಳನ್ನ ಬೆಳೆಸುವುದಕ್ಕೆ ತಂದೆ ತಾಯಿಗೂ ತಿಳಿದಿಲ್ಲ ಮತ್ತು ಶಿಕ್ಷಕರಿಗೂ ಗೊತ್ತಿಲ್ಲ. ಹೀಗಾಗಿ ನಮ್ಮ ಮಕ್ಕಳು ಗುರುತಿಸಿಕೊಳ್ಳುತ್ತಿಲ್ಲ. ಈ ದೇಶದಲ್ಲಿ ಕೆಟ್ಟ ಮಕ್ಕಳು ಯಾವ ಕಾಲಕ್ಕೂ ಹುಟ್ಟಲ್ಲ. ಆದರೆ ತಂದೆ-ತಾಯಿಯ ಮೊದಲ ಕೆಲಸವೆಂದರೆ ಮಕ್ಕಳಲ್ಲಿ ಯಾವ ಪ್ರತಿಭೆ ಇದೆ ಎಂದು ಹುಡುಕಬೇಕು ಎಂದು ಖ್ಯಾತ ಅಂಕಣಕಾರರು, ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರು ಪರಮಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.

ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ ಕಾರಣಗಿರಿ ಮತ್ತು ದಿನೇಶ್ ಜೋಷಿ ಫೌಂಡೇಶನ್ ಆಶ್ರಯದಲ್ಲಿ ಹೊಸನಗರದ ಗಾಯತ್ರಿ ಮಂದಿರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ – 2023 ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಪುಣ್ಯಭೂಮಿ. ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ರ‍್ಯಾಂಕ್‌ಗಳಿಸಿದ ಮೊದಲ ಹತ್ತು ಸ್ಥಾನಗಳ ಪೈಕಿ ಎಂಟರಿಂದ ಒಂಬತ್ತು ಜನ ಭಾರತೀಯರು ಇರುತ್ತಾರೆ. ಈ ಪುಣ್ಯ ಭೂಮಿಯಲಿ ಹುಟ್ಟಲು ಪುಣ್ಯ ಮಾಡಿರಬೇಕೆ ಎಂದು ಅವರು ಹೇಳಿದರು.

ದಿವ್ಯ ಉಪಸ್ಥಿತಿಯಿದ್ದ ಬೆಂಗಳೂರಿನ ರಾಮಕೃಷ್ಣ ವೇದಾಂತ ಆಶ್ರಮದ ಪರಮಪೂಜ್ಯ ಶ್ರೀ ಸ್ವಾಮಿ ಅಭಯಾನಂದಜಿ ಮಹಾರಾಜ್ ಮಾತನಾಡಿ, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಪುರಸ್ಕಾರವನ್ನ ನೀಡಬೇಕು ಎಂಬ ದೃಷ್ಟಿಯಿಂದ ಇಂತಹ ದೊಡ್ಡ ಕಾರ್ಯಕ್ರಮವನ್ನ ಆಯೋಜಿಸಿದ್ದು ನಿಜಕ್ಕೂ ಗಮನಾರ್ಹ ಸಾಧನೆ ಎಂದು ಅವರು ಹೇಳಿದರು.

ಮತ್ತಿಮನೆ-ಸುಳಗೋಡು ರಾಮಕೃಷ್ಣ ಯೋಗಪೀಠದ ಪರಮಪೂಜ್ಯ ಶ್ರೀ ಪ್ರಕಾಶಾನಂದಜೀ ಮಹಾರಾಜ ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ. ಎಸ್. ನಳಿನಚಂದ್ರ, ದಿನೇಶ್ ಜೋಷಿ ಫೌಂಡೇಶನ್‌ನ ಟ್ರಸ್ಟಿ ಮ. ಸ. ನಂಡುಂಡಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯ ಹನಿಯ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕಾಪು ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಡಸೂರು ಶ್ರೀಧರ ಮೂರ್ತಿಯವರನ್ನು ಸನ್ಮಾನಿಸಲಾಯಿತು.
ಹನಿಯ ರವಿ ಸ್ವಾಗತಿಸಿ, ಶ್ವೇತಾ ವಿ. ಜೋಯಿಸ್ ನಿರೂಪಿಸಿ, ವಿನಾಯಕ ಪ್ರಭು ವಂದಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿಯಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ 120 ಕ್ಕೂ ಹೆಚ್ಚು ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು.

Leave A Reply

Your email address will not be published.

error: Content is protected !!