ರೇಣುಕಾಂಬ ಕಲಾ ನಾಟ್ಯ ಸಂಘದಿಂದ ನಡೆದ ಸಾಮಾಜಿಕ ನಾಟಕ ಪ್ರದರ್ಶನ

0 229

ಸೊರಬ : ಚಂದ್ರಗುತ್ತಿ ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ಹಾಗೂ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ 8ನೇ ವರ್ಷದ ದಸರಾ ಉತ್ಸವದ 5ನೇ ದಿನ ಶ್ರೀ ರೇಣುಕಾಂಬ ಕಲಾ ನಾಟ್ಯ ಸಂಘ ಇವರಿಂದ ಅನ್ಯಾಯ ಅಳಿಯಿತು ಸ್ನೇಹ ಬೆಳೆಯಿತು ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು.

ಪಾತ್ರಧಾರಿಗಳಾಗಿ ವಾಸುದೇವ್ ಎಸ್ ಊರಿನ ಹಿರಿಯರು ಪಾತ್ರದಲ್ಲಿ, ರಾಮ ಸ್ವಾದಿ ಸ್ವಾಭಿಮಾನಿ ರೈತನ ಪಾತ್ರದಲ್ಲಿ, ಪ್ರಜ್ವಲ್ ಕಥನಾಯಕ ಪಾತ್ರದಲ್ಲಿ, ವಸಂತ್ ಶೇಟ್ ಕ್ರಾಂತಿಕಾರಿ ನಾಯಕ ಪಾತ್ರದಲ್ಲಿ, ರತ್ನಾಕರ್ ಎಂ.ಪಿ ಖಳನಾಯಕ ಪಾತ್ರದಲ್ಲಿ, ಪ್ರಕಾಶ್ ಮಿರ್ಜಿ ಖಳನಾಯಕ ಪಾತ್ರದಲ್ಲಿ, ರಾಮಕೃಷ್ಣ ಹಾಸ್ಯ ಪಾತ್ರದಲ್ಲಿ, ಮಣಿಕಂಠ ಡಾಕ್ಟರ್ ಪಾತ್ರದಲ್ಲಿ, ವರುಣ್ ಶೇಟ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಗಣಪತಿ ಪೊಲೀಸ್ ಪಾತ್ರದಲ್ಲಿ, ಮಲ್ಯ ಪಾತ್ರದಲ್ಲಿ ರಾಘವೇಂದ್ರ ಪಾತ್ರಧಾರಿಗಳಾಗಿ ಕಾಣಿಸಿಕೊಂಡರು.

ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಜಡೆ ಸಂಸ್ಥಾನ ಮಠದ ಡಾಕ್ಟರ್ ಮಹಾಂತ ಸ್ವಾಮೀಜಿ ಮಾತನಾಡಿ ಮನುಷ್ಯನು ತನ್ನ ಜೀವನದಲ್ಲಿ ಬರುವ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಸುಜ್ಞಾನದ ಹಾದಿಯಲ್ಲಿ ನಡೆಯಲು ನವರಾತ್ರಿ ಉತ್ಸವಗಳು ಪೂರಕವಾಗಿದೆ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ ಮಾತನಾಡಿ ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಿಂದ ಮೈಸೂರು ಒಡೆಯರ ಕಾಲದವರೆಗೆ ದಸರಾ ಉತ್ಸವ ಕಾರ್ಯಕ್ರಮಗಳು ನಡೆದುಕೊಂಡು ಬಂದಿದ್ದು. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಜನರಲ್ಲಿ ಸಾಂಸ್ಕೃತಿಕ ಭಾವನೆ ಹೆಚ್ಚುತ್ತದೆ ಎಂದರು.

ಚಂದ್ರಗುತ್ತಿ ಕಲೆಗಳ ತವರೂರಾಗಿದ್ದು ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಸಾಂಸ್ಕೃತಿಕ ಆಚರಣೆಯಿಂದಾಗಿ ಹೆಚ್ಚು ಕಲಾವಿದರಿಗೆ ಜಾನಪದ, ಸಾಮಾಜಿಕ, ಯಕ್ಷಗಾನ, ಬಯಲಾಟ, ಪೌರಾಣಿಕ ನಾಟಕದಂತಹ ಕಲೆಗಳಿಗೆ ಅವಕಾಶ ಸಿಗುತ್ತಿದ್ದು. ಯುವಕರು, ವಯಸ್ಕರು, ಮತ್ತು ಮಹಿಳೆಯರು ಎಲ್ಲರಿಗೂ ಸಹ ತಮ್ಮ ಕಲೆಗಳನ್ನು ಪ್ರದರ್ಶಿಸುವಲ್ಲಿ ಸಕ್ರಿಯರಾಗಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಸಹಕಾರಿಯಾಗಿದೆ.
– ಪ್ರಜ್ವಲ್ ಚಂದ್ರಗುತ್ತಿ, ಉಪನ್ಯಾಸಕರು ಹಾಗೂ ಜನಪದ ಕಲಾವಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಡಾ.ಆರ್ ಶ್ರೀಧರ್ ಹುಲ್ತಿಕೊಪ್ಪ ವಹಿಸಿದ್ದರು, ಪುರಸಭೆ ಮಾಜಿ ಅಧ್ಯಕ್ಷ ಹೆಚ.ಎಸ್ ಮಂಜಪ್ಪ, ಪ್ರಮುಖರಾದ ಚಂದ್ರಪ್ಪ ಹೊಳೆಮರೂರು, ಸುರೇಂದ್ರ ಗೌಡ, ದೇವಕಿ ಪಾಣಿ ರಾಜಪ್ಪ, ಸೇರಿದಂತೆ ಮೊದಲಾದವರಿದ್ದರು.


Leave A Reply

Your email address will not be published.

error: Content is protected !!