Hosanagara | ದುರ್ಗಾಂಬಾ ಹಾಗೂ ಮಾರಿಕಾಂಬ ದೇವಸ್ಥಾನದಲ್ಲಿ ನವರಾತ್ರಿ ಪೂಜೆ, ಅನ್ನಸಂತರ್ಪಣೆ

0 256

ಹೊಸನಗರ: ಪಟ್ಟಣದ ಹಳೇ ಸಾಗರ ರಸ್ತೆಯಲ್ಲಿರುವ ದುಗಾಂಬ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 15 ಭಾನುವಾರದಿಂದ ಅ. 23 ಸೋಮವಾರದವರೆಗೆ ಅದ್ದೂರಿಯಾಗಿ 9 ದಿನ ನವರಾತ್ರಿ ಉತ್ಸವ ಆಚರಿಸಲಾಗುವುದೆಂದು ದುರ್ಗಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್.ಎನ್ ಶ್ರೀಪತಿರಾವ್‌ ತಿಳಿಸಿದರು.


ಅಕ್ಟೋಬರ್ 15ನೇ ಭಾನುವಾರದಿಂದ 12.30ಕ್ಕೆ ಮಹಾಪೂಜೆ ಮಧ್ಯಾಹ್ನ 1ಗಂಟೆಗೆ ಪ್ರಸಾದ ವಿನಿಯೋಗ ನಂತರ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 7 ಗಂಟೆಗೆ ಪಲ್ಲಕ್ಕಿ ಉತ್ಸವ, ಭಜನೆ, ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗವಿದ್ದು ಅಕ್ಟೋಬರ್ 22ನೇ ಭಾನುವಾರ ದುರ್ಗಾಷ್ಠಮಿ ದಿನದಂದು ಶ್ರೀ ದುಗಾಹೋಮ, 12ಗಂಟೆಗೆ ಪೂಣ್ಯಾಹುತಿ, ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಪ್ರತಿದಿನ ಸುಷ್ಮಾ ಶ್ರೀನಿವಾಸ್, ಸೇತುಮಾಧವರಾವ್, ಮತ್ತು ಸಹೋದರರು, ವೇದಾವತಿ ಹೆಚ್.ವಿ ಮಹಾಬಲ, ಭಾವನಿ ನಟರಾಜ್, ಸುಭದ್ರ ಎನ್ ಶ್ರೀಧರ ಉಡುಪ, ಶೈಲ ರಾಘವೇಂದ್ರರಾವ್, ರಶ್ಮೀ ಗುರುರಾಜ್, ಉಮೇಶ್ ಕಂಚುಗಾರ್ ಚೇತನ್‌ಕುಮಾರ್ ವಿನಯ್ ವೆಂಕಟೇಶ್ ಶೇಟ್ ಇನ್ನೂ ಮುಂತಾದವರು ಅನ್ನಸಂತರ್ಪಣೆ ಕಾರ್ಯ ನಡೆಸಿಕೊಡುವರು.

ದುರ್ಗಾಂಬಾ ದೇವಸ್ಥಾನದ ಭಕ್ತಾರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಸ್ಥಾನದ ಪೂಜಾ ಕಾರ್ಯವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮಾರಿಕಾಂಬ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
ಪಟ್ಟಣದ ಮಾರಿಗುಡ್ಡದಲ್ಲಿರುವ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 15 ಭಾನುವಾರದಿಂದ ಅಕ್ಟೋಬರ್ 23 ಸೋಮವಾರದವರೆಗೆ ಅದ್ದೂರಿಯಾಗಿ 9ದಿನ ನವರಾತ್ರಿ ಉತ್ಸವ ಆಚರಿಸಲಾಗುವುದೆಂದು ಮಾರಿಕಾಂಬ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣರವರು ತಿಳಿಸಿದರು.


ಅಕ್ಟೋಬರ್ 15 ಭಾನುವಾರದಿಂದ 23 ಸೋಮವಾರದವರೆಗೆ ಪ್ರತಿ ದಿನ ಬೆಳಿಗ್ಗೆ ವಿಶೇಷ ರೀತಿಯಲ್ಲಿ ಮಾರಿಕಾಂಬ ಅಮ್ಮನವರಿಗೆ ಪೂಜೆ ಸಂಜೆ ಪೂಜೆ ಹೋಮ ಹವನಗಳು ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ 1ಗಂಟೆಗೆ ವಿವಿಧ ಭಕ್ತರಿಂದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ದೇವಿಯ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.


ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಎಲ್ಲ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!