ಹಿಟ್ ಅಂಡ್ ರನ್‌ಗೆ ಮಹಿಳೆ ಬಲಿ !

0 1,134

ತೀರ್ಥಹಳ್ಳಿ : ತಾಲೂಕಿನ ಆರಗ ಸಮೀಪದ ಹಿರೇಸರದ ಬಳಿ ಹಿಟ್ ಅಂಡ್ ರನ್‌ಗೆ ಮಹಿಳೆ ಬಲಿಯಾದ ಘಟನೆ ಇಂದು ಸಂಜೆ ನಡೆದಿದೆ.

ಮೃತರನ್ನು ತೀರ್ಥಹಳ್ಳಿ ತಾಲ್ಲೂಕಿನ ತನಿಕಲ್ ಗ್ರಾಮದ ಸ್ವಾಮಿ ಎಂಬುವವರ ಪತ್ನಿ ಶುಭ (47) ಮೃತ ಮಹಿಳೆ.

ತೀರ್ಥಹಳ್ಳಿಯಿಂದ ಕೋಣಂದೂರಿಗೆ ಪತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಹಾವೇರಿ ಮೂಲದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಶುಭ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್‌ನಲ್ಲಿ ಚಲಾಯಿಸುತ್ತಿದ್ದ ಮೃತರ ಪತಿ ಸ್ವಾಮಿ ಎಂಬುವವರಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಹಾವೇರಿ ಮೂಲದ ವ್ಯಕ್ತಿ ಸ್ವಿಫ್ಟ್ ಕಾರಲ್ಲಿ ಅಪಘಾತ ಮಾಡಿ ಪರಾರಿಯಾಗಿದ್ದ ವೇಳೆ ಕವಲೇದುರ್ಗದ ಬಳಿ ಆತನನ್ನ ಸ್ಥಳೀಯರು ಹಿಡಿದಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!