9 ದಿನಗಳ ಹೊಸನಗರದ ಶ್ರೀ ಮಾರಿಕಾಂಬಾ ಜಾತ್ರೆ ವಿಸರ್ಜನಾ ಪೂಜೆಯೊಂದಿಗೆ ಅದ್ದೂರಿಯಿಂದ ಸಂಪನ್ನ

0 290

ಹೊಸನಗರ : ಪ್ರತಿ ವರ್ಷ ನಡೆಯುವ ಪಟ್ಟಣದ ಶಕ್ತಿ ದೇವತೆ ಶ್ರೀ ಮಾರಿಕಾಂಬಾ ಅಮ್ಮನವರ 9 ದಿನಗಳ ಜಾತ್ರಾ ಮಹೋತ್ಸವ ಬುಧವಾರ ರಾತ್ರಿ 11:30ಕ್ಕೆ ವಿಸರ್ಜನಾ ಪೂಜೆಯೊಂದಿಗೆ ನೆರೆದಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

9 ದಿನಗಳ ಕಾಲ ಶಕ್ತಿ ದೇವತೆಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಏರ್ಪಡಿಸಲಾಗಿತ್ತು. ಪ್ರತಿದಿನ ಶ್ರೀ ಮಾರಿಕಾಂಬಾ ರಂಗ ಮಂದಿರದಲ್ಲಿ ಸಂಗೀತ, ನೃತ್ಯ, ನಾಟಕ, ಆರ್ಕೆಸ್ಟ್ರಾ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿಜಯ್ ವಿಲ್ಸನ್ ಅಮ್ಯೂಸ್ಮೆಂಟ್ ನವರಿಂದ ರೋಮಾಂಚನಕಾರಿ ಜಾಯಿಂಟ್ ವೀಲ್, ಕೊಲಂಬಸ್, ಬ್ರೇಕ್ ಡಾನ್ಸ್, ಮಾರುತಿ ಡೂಮ್, ಮಕ್ಕಳ ರೈಲು, ಬೈಕ್, ಕಾರು ಸೇರಿದಂತೆ ವಿವಿಧ ರೀತಿಯ ಆಕರ್ಷಕ ಮನೋರಂಜನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/v/brmTyvSSwDiJ6Vpn/?mibextid=w8EBqM

ಜಾತ್ರಾ ಮಹೋತ್ಸವದಲ್ಲಿ ರಾಜ್ಯಾದ್ಯಂತ ಅಲ್ಲದೆ ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಭಕ್ತ ವೃಂದದವರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮಾರಿಕಾಂಬೆಯ ಕೃಪೆಗೆ ಪಾತ್ರರಾದರು.

Leave A Reply

Your email address will not be published.

error: Content is protected !!