Hosanagara | ನಾಳೆಯಿಂದ 08 ದಿನಗಳ ಕಾಲ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ

0 598

ಹೊಸನಗರ : ಪಟ್ಟಣದಲ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಫೆ. 6 ರಿಂದ ಆರಂಭವಾಗಲಿದ್ದು, 14ರವರೆಗೆ ನಡೆಯಲಿದೆ.

ಮಂಗಳವಾರ ಬೆಳಿಗ್ಗೆ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಮಾರಿಕಾಂಬಾ ದೇವಿಯನ್ನು ಮೆರವಣಿಗೆ ಮೂಲಕ ತವರುಮನೆಯಾದ ಹಳೇ ಸಾಗರ ರಸ್ತೆ ದುರ್ಗಾಂಬಾ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಫೆ. 7ರಂದು ಮಾರಿಗುಡ್ಡದಲ್ಲಿನ ಮಾರಿಕಾಂಬಾ ದೇವಿ ಗದ್ದುಗೆಯಲ್ಲಿನ ದೇವಸ್ಥಾನ ಆವರಣದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಬಳಿಕ ವಿವಿಧ ‌ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರಿಗುಡ್ಡದ ಆವರಣದಲ್ಲಿ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.

ಮಾರಿಗುಡ್ಡದಲ್ಲಿ 8 ದಿನಗಳ ಕಾಲ ಮಹೋತ್ಸವ ನಡೆಯಲಿದೆ. ಪ್ರತಿ ದಿನವೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ‌‌ನಡೆಯಲಿವೆ.

Leave A Reply

Your email address will not be published.

error: Content is protected !!