ವಿದ್ಯಾರ್ಥಿಗಳ ಶಿಕ್ಷಣ ವಿಕಸಕ್ಕೆ ಪೋಷಕರ ಸಹಕಾರ ಅಗತ್ಯವಿದೆ ; ಶಾಸಕ ಆರಗ ಜ್ಞಾನೇಂದ್ರ

0 476

ಹೊಸನಗರ : ಅಂಕ, ಫಲಿತಾಂಶದ ಜೊತೆಗೆ ಮಕ್ಕಳಲ್ಲಿ ಬದುಕಿನ ಮೌಲ್ಯಗಳನ್ನು ತುಂಬು ಕಾರ್ಯ ಆಗಬೇಕಿದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಾಂಸ್ಕೃತಿಕ ಸಮಾರಂಭ 2023-24 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳು ಹಿರಿಯರಿಗೆ ಗೌರವ ನೀಡುವಂತ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಸುತ್ತಲಿನ ಪರಿಸರದಲ್ಲಿ ಕಲಿತು ಬೆರೆಯುವ ನಡವಳಿಕೆ ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಸತ್ಪ್ರಜೆ ಆಗಬೇಕೆಂದರು. ಶಿಕ್ಷಣದಷ್ಟೇ ಪಠ್ಯೇತರ ಚಟುವಟಿಕೆಯಲ್ಲೂ ಸಾಧನೆ ಗೈಯುವಂತೆ ವಿದ್ಯಾಥಿಗಳಿಗೆ ಅವರು ಕಿವಿಮಾತು ಹೇಳಿದರು.

ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮಾಜಿ ಶಾಸಕ ಬಿ.ಸ್ವಾಮಿರಾವ್ ಬಹುಮಾನ ವಿತರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಜೆ.ಎನ್. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯ ಸತೀಶ್, ಹೂವಮ್ಮ ರಾಮಚಂದ್ರ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಬೇರಪ್ಪ, ಸಿಆರ್‌ಸಿ ಹೆಚ್.ಕೆ. ಪ್ರದೀಪ್, ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಸತೀಶ್ ಕೆ. ಶೆಟ್ಟಿ, ರವೀಂದ್ರ, ಸುರೇಶ್, ಭೋಜಪ್ಪ, ದಿನೇಶ್, ಸುಧಾಕರ್, ಪುಟ್ಟಸಾಮಿ, ಸರಿತ, ಸ್ಮಜಾತ, ಸುಮಲತಾ, ಶರಾವತಿ, ನಳಿನಿ, ಶಶಿಕಲಾ, ಶೀಲಾ, ಮಧುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕು|| ಸ್ಪಂದನ ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಎ.ಕೆ. ಮಲ್ಡ್ಯಪ್ಪ ಸ್ವಾಗತಿಸಿದರು. ಶಿಕ್ಷಕ ಸಿ.ಎನ್. ಸುರೇಶ್ ವರದಿ ವಾಚಿಸಿದರು. ಶಿಕ್ಷಕಿ ದೀಪಾ, ಸುಭದ್ರಬಾಯಿ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.

error: Content is protected !!