ಹೆಣ್ಣನ್ನು ಗೌರವಿಸುವ ಮೂಲಕ ಸಮರ್ಪಣ ಮನೋಭಾವನೆ ಹೊಂದುವಂತೆ ಕರೆ

0 214

ಹೊಸನಗರ : ಪಟ್ಟಣದ ಸಂತ ಅಂತೋನಿ ದೇವಾಲಯದ ವಾರ್ಷಿಕ ಮಹೋತ್ಸವವನ್ನು ಇಂದು ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಸಂಭ್ರಮದಿಂದ ಆಚರಿಸಿದರು

ಕ್ರೈಸ್ತ ಬಾಂಧವರು ಹೊಸ ಬಟ್ಟೆ ಧರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿ ಸಂಭ್ರಮಿಸಿದರು. ಇಂದು ಬೆಳಿಗ್ಗೆ ಜಿಲ್ಲಾದ್ಯಂತದ ಸುಮಾರು 20 ಧರ್ಮ ಕೇಂದ್ರದ ಧರ್ಮ ಗುರುಗಳು ಹೊಸನಗರ ಧರ್ಮ ಕೇಂದ್ರದ ಧರ್ಮ ಗುರುಗಳಾದ ರೆಫಾ ಸೈಮನ್ ಹೊರಟ ನೇತೃತ್ವದಲ್ಲಿ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮ ಅಧ್ಯಕ್ಷರಾದ ರೆಡಾ ಫ್ರಾನ್ಸಿಸ್ ಸೆರಾವೋ ರವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಸಂತ ಅಂತೋನಿ ಧಾರ್ಮಿಕ ಕೇಂದ್ರದ ವಾರ್ಷಿಕ ಮಹೋತ್ಸವಕ್ಕೆ ಬಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ ಧರ್ಮಧ್ಯಕ್ಷರು, ಮಹಿಳೆಯರನ್ನು ತಾತ್ಸಾರ ಮನೋಭಾವದಿಂದ ಕಾಣದೆ ಅವರನ್ನು ಸಮರ್ಪಣಾ ಮನೋಭಾವದಿಂದ ಕಾಣಬೇಕೆಂದು, ಹೆಣ್ಣು ಅಬಲೆ ಅಲ್ಲ ಸಬಲೆ ಹೆಣ್ಣಿಗೂ ಸಮಾನ ಹಕ್ಕು ಅಗತ್ಯ ಎಂದರು.

ಅವರು ಸಂದೇಶ ನೀಡಿ ಎಲ್ಲರೂ ವಿವೇಕತೆಯನ್ನು ಹೊಂದಿ ಫಲಭರಿತರಾಗಬೇಕು ಎಂದು ಹೇಳಿ, ಸಂತ ಅಂತೋನಿ ಅವರ ಜೀವನ ಸ್ಮರಿಸಿದರು ವಿಶ್ವಶಾಂತಿಗಾಗಿ ಎಲ್ಲರೂ ಒಗ್ಗೂಡಬೇಕು. ಯುವ ಪೀಳಿಗೆ ಉತ್ತಮ ಮಾರ್ಗದಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಸಂಬಂಧಗಳು ಕೆಟ್ಟರೆ ಮನುಷ್ಯರ ನಡುವೆ ಅಂತರ ಹೆಚ್ಚಾಗಲಿದೆ. ಮೊದಲು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದಕ್ಕೂ ಮೊದಲು ನಿನ್ನೆ ಸಂಜೆ ಕ್ರೈಸ್ತ ಬಾಂಧವರು ದೇವಾಲಯದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

Leave A Reply

Your email address will not be published.

error: Content is protected !!