ಹೊಸನಗರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ | ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ; ಡಾ. ಜಿ.ಡಿ ನಾರಾಯಣಪ್ಪ

0 345

ಹೊಸನಗರ: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ್ದು ಕೆಟ್ಟ ಚಟಗಳಿಂದ ನಮ್ಮ ಆರೋಗ್ಯ ನಾವು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಜಿ ಶಾಸಕ ಹಾಗೂ ಆರೈಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಿ.ಡಿ ನಾರಾಯಣಪ್ಪನವರು ಹೇಳಿದರು.

ಪಟ್ಟಣದ ಸ್ಫೋಟ್ಸ್ ಅಸೋಸಿಯೇಷನ್‌ ಕ್ಲಬ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2;30ರ ವರೆಗೆ ಆರೈಕೆ ಆಸ್ವತ್ರೆ ಶಿವಮೊಗ್ಗ, ಸ್ಫೋಟ್ಸ್ ಅಸೋಸಿಯೇಷನ್ ಕ್ಲಬ್ ಹೊಸನಗರ, ಜೆಎಸಿ ಮತ್ತು ಜೇಸಿಐ ಕೊಡಚಾದ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನವರು ತಮ್ಮ ಆರೋಗ್ಯವನ್ನು ತಾವು ತಿನ್ನುವ ಆಹಾರದಲ್ಲಿ ಹುಡುಕಿ ತಿನ್ನುವುದರ ಜೊತೆಗೆ ಮಿತಿಯಾಗಿ ಸೇವಿಸುತ್ತಿದ್ದರು. ಆದರೆ, ಕಾಲ ಬದಲಾದಂತೆ ನಾವು ತಿನ್ನುವ ಆಹಾರ ಸೇವನೆ ಮತ್ತು ಕುಡಿಯುವ ಚಟದಿಂದ ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ನಮ್ಮಲ್ಲಿ ಯಾವುದೇ ಚಟಗಳಿದ್ದರೂ ಅವುಗಳನ್ನು ನಿಯಂತ್ರಿಸಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೇ ತಮ್ಮ ಜೀವನವನ್ನು ಯಾವುದೇ ಕಾಯಿಲೆಗಳಿಗೆ ಗುರಿಯಾಗದಂತೆ ಕಾಪಾಡಿಕೊಂಡು ಸುಖ ಜೀವನ ನಡೆಸಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಫೋಟ್ಸ್ ಕ್ಲಬ್ ಅಧ್ಯಕ್ಷ ಗುಬ್ಬಿಗಾ ಆನಂತರಾವ್ ಮನುಷ್ಯರಿಗೆ ಕಾಯಿಲೆ ಬರುವುದು ಸಹಜ ಅದನ್ನು ಮೊದಲ ಹಂತದಲ್ಲಿಯೇ ಡಾಕ್ಟರ್‌ಗಳಿಗೆ ತೋರಿಸುವುದರಿಂದ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು ಕಾಯಿಲೆ ದ್ವಿಗುಣವಾದಲ್ಲಿ ಗುಣಪಡಿಸುವುದು ಕಷ್ಟಕರವಾಗುತ್ತದೆ ಹಾಗೂ ಅಧಿಕ ಹಣ ವ್ಯಯ ಮಾಡಬೇಕಾಗುತ್ತದೆ ನಾವು ಮಾಡುವ ಇಂತಹ ಉಚಿತ ಶಿಬಿರಗಳಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ನಮ್ಮ ಸಂಸ್ಥೆ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದ್ದು ಈ ಉಚಿತ ಶಿಬಿರದಲ್ಲಿ ಪ್ರತಿಯೊಬ್ಬರು ಭಾಗವಹಿಸುವುದರಿಂದ ತಮ್ಮ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದರು.

ಸುಮಾರು 350 ಜನರು ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರ ಜೊತೆಗೆ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು.
ರೋಗಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸ್ಫೋಟ್ಸ್ ಕ್ಲಬ್‌ ವತಿಯಿಂದ ಏರ್ಪಡಿಸಲಾಗಿತ್ತು.

ಹೊಸನಗರ ಇತಿಹಾಸದಲ್ಲಿಯೇ ಇಂಥಹ ಶಿಬಿರ ಏರ್ಪಡಿಸಿರುವುದು ಇದು ಪ್ರಪ್ರಥಮವಾಗಿದ್ದು ಈ ಶಿಬಿರಾದಲ್ಲಿ ರಕ್ತ ಪರೀಕ್ಷೆ, ಬಿ.ಪಿ, ಪರೀಕ್ಷೆ, ಶೂಗರ್ ಪರೀಕ್ಷೆ, ಇ.ಸಿ.ಜಿ ಪರೀಕ್ಷೆ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು‌‌.

ಈ ತಪಾಸಣಾ ಶಿಬಿರದಲ್ಲಿ ಎಂಬಿಬಿಎಸ್ ಜನರಲ್ ಸರ್ಜನ್ ಡಾ. ಜಿ.ಡಿ ನಾರಾಯಣಪ್ಪ, ಅರವಳಿಕೆ ತಜ್ಞರಾದ ಡಾ. ಸುರೇಶ ಕೆ.ಎಂ, ಚರ್ಮರೋಗ ತಜ್ಞರಾದ ಡಾ. ಆಶಾ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಅಮೃತಾಂಶು, ಕೀಲು ಮತ್ತು ಮೂಳೆ ರೋಗ ತಜ್ಞರಾದ ಡಾ. ವಿನಯ್ ಕೆ.ವೈ ಹಾಗೂ ಫ್ಯಾಮಿಲಿ ಮೆಡಿಸಿನ್ ಡಾ. ಮಂಜುನಾಥ್ ಹಾಗೂ ದಂತ ರೋಗ ತಜ್ಞರಾದ ಡಾ. ಅನಿತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ತಪಾಸಣೆಯಲ್ಲಿ ಗೌರವಾಧ್ಯಕ್ಷರಾದ ಪರಮೇಶ್ವರರಾವ್, ಅಧ್ಯಕ್ಷರಾದ ಗುಬ್ಬಿಗಾ ಅನಂತರಾವ್, ಉಪಾಧ್ಯಕ್ಷರಾದ ಪ್ರಭಾಕರ್, ಕಾರ್ಯದರ್ಶಿ ಬ್ಯಾಂಕ್ ಶ್ರೀಧರ, ಬಿ.ಎಸ್ ಸುರೇಶ, ಎಂ.ಪಿ ಸುರೇಶ, ಎಂ.ವಿ ಸುರೇಶ, ಕಲ್ಯಾಣಪ್ಪ ಗೌಡ, ಸತ್ಯನಾರಾಯಣ, ಕೆ.ಬಿ ಸತೀಶ, ಮಹೇಂದ್ರ, ಮಳಲಿ ಶ್ರೀಕಾಂತ, ವ್ಯವಸ್ಥಾಪಕರಾದ ಕಟ್ಟೆ ಸುರೇಶ, ಕೃಷ್ಣಮೂರ್ತಿ, ಜೆಸಿಐ ಅಧ್ಯಕ್ಷರಾದ ವಿನಯ್‌ಕುಮಾರ್, ರಾಧಾಕೃಷ್ಣ ಪೂಜಾರಿ, ದ್ಯಾವರ್ಸ ನಾಗೇಶ, ಸ್ವಾಮಿ ಹಾಗೂ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!