ಸೊರಬ: ತಾಲೂಕಿನ ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶೀ ರೇಣುಕಾಂಬ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆಯಿತು.
ತಾಲೂಕು ದಂಡಾಧಿಕಾರಿ ಹುಸೇನ್ ಸರಕಾವಸ್ ಅವರ ಸಮ್ಮುಖದಲ್ಲಿ ಶೀ ರೇಣುಕಾಂಬ ದೇವಸ್ಥಾನಕ್ಕೆ ಭಕ್ತರ ಮೂಲಕ ಬಂದಂತಹ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಯಿತು.
ಫೆಬ್ರವರಿ ತಿಂಗಳಿನಲ್ಲಿ ಹುಂಡಿ ಹಣ ಎಣಿಕೆ ಏಣಿಸಿದಾಗ 25,67,710 ರೂ., ಸಂಗ್ರಹವಾಗಿದ್ದು. ಕಳೆದ 2022 ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್ ತಿಂಗಳಿನಲ್ಲಿ ಹುಂಡಿ ಹಣ ಎಣಿಕೆ ಮಾಡಿದಾಗ 94,65,575 ರೂ, ಸಂಗ್ರಹವಾಗಿದ್ದು, ಕೇವಲ 12 ತಿಂಗಳಗಳಲ್ಲಿ ದೇವಸ್ಥಾನದ ಗರಿಷ್ಠ ಮೊತ್ತದ ಕಾಣಿಕೆ ಹಣ 1,20,33, 286 ರೂ., ಸಂಗ್ರಹವಾಗಿದೆ.
ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿ.ಸಿ ಕ್ಯಾಮೆರಾ ಆಳವಡಿಸಲಾಗಿತ್ತು.
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಗಳು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಮುಜರಾಯಿ ಇಲಾಖೆ ವಿಷಯ ನಿರ್ವಾಹಕರು, ತಾಲೂಕು ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು, ಮತ್ತು ದೇವಸ್ಥಾನದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಭಕ್ತರ ಮೂಲಕ ದೇವಸ್ಥಾನಕ್ಕೆ ಕೋಟ್ಯಾಂತರ ಆದಾಯ ಸಂಗ್ರವಾಗುತ್ತದೆ ವಿನಃ ಬರುವ ಭಕ್ತರಿಗೆ ಕುಡಿಯುವ ನೀರು, ವಸತಿ, ಶೌಚಾಲಯಗಳು ಮತ್ತು ಬೇಕಾಗುವ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಕ್ಷೇತ್ರ ಅಭಿವೃದ್ಧಿ ಆಗುತ್ತಿಲ್ಲ ಎಂಬುವುದು ಭಕ್ತರ ಆರೋಪವಾಗಿದೆ.