ಹೆಜ್ಜೇನು ದಾಳಿ ; ದಂಪತಿ ಸ್ಥಿತಿ ಗಂಭೀರ !

0 7

ಸೊರಬ: ಹೆಜ್ಜೇನು ದಾಳಿಯಿಂದ ದಂಪತಿಗಳ ಸ್ಥಿತಿ ಗಂಭೀರವಾದ ಘಟನೆ ವರದಿಯಾಗಿದೆ.

ತಾಲೂಕಿನ‌ ಆನವಟ್ಟಿ ಸಮೀಪದ ಹಿರೇಇಡಗೂಡು ಗ್ರಾಮದ ಕೃಷ್ಣಪ್ಪ (62) ಹಾಗೂ ರೇಣುಕಮ್ಮ(57) ದಂಪತಿಗೆ ಬುಧವಾರ ಹೆಜ್ಜೇನು ಕಡಿದಿದ್ದು ಅವರ ಸ್ಥಿತಿ ಗಂಭೀರವಾಗಿದೆ.

ಕೃಷ್ಣಪ್ಪ ಹಾಗೂ ರೇಣುಕಮ್ಮ ದಂಪತಿ ಮನೆಯ ಹಿಂಭಾಗದಲ್ಲಿ ಬೇಲಿ ಸವರುವ ವೇಳೆ ಜೇನು ಕಡಿದಿದ್ದು ಶಿಕಾರಿಪುರ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಿ ಐಸಿಯುನಲ್ಲಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಏಳನೇ ವೇತನ ಆಯೋಗ ಜಾರಿಗಾಗಿ ಸರ್ಕಾರಿ ನೌಕರರ ಮುಷ್ಕರ ಇರುವುದರಿಂದ ಆನವಟ್ಟಿ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗವನ್ನು ಬಂದ್ ಮಾಡಲಾಗಿತ್ತು. ಆದರೆ ವೈದ್ಯರು ದಂಪತಿಗೆ ತುರ್ತು ಚಿಕಿತ್ಸೆ ನೀಡಲು ಸ್ಪಂದಿಸಿದರು. ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಾಗಿದೆ.

Leave A Reply

Your email address will not be published.

error: Content is protected !!