ಚಂದ್ರಗುತ್ತಿ ; ಆಯುಧ ಪೂಜೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರ ಆಗಮನ, ವಿಶೇಷ ಪೂಜೆ

0 179

ಸೊರಬ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಶರನ್ನವರಾತ್ರಿ ಆಯುಧ ಪೂಜೆಯಂದು ಮಂಗಳವಾರ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್‌, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಲೆನಾಡಿನ ಆರಾಧ್ಯ ದೇವಿ ರೇಣುಕಾದೇವಿಯನ್ನು ದರ್ಶನ ಪಡೆದು ಉದೋ ಉದೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿ ಶರನ್ನವರಾತ್ರಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಶರನ್ನವರಾತ್ರಿ ಪ್ರಯುಕ್ತ 9 ದಿನಗಳ ಕಾಲ ದೇವಾಲಯದಲ್ಲಿ ಪ್ರತಿನಿತ್ಯ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನಡೆದು ಬಂದಿದ್ದು. ಮಂಗಳವಾರ ಚಂಡಿಕಾ ಹೋಮ, ಆಯುಧ ಪೂಜೆ, ವಿವಿಧ ಪೂಜಾ ವಿಧಾನಗಳು ಜರುಗಿದವು. ಇನ್ನು ಮಂಗಳವಾರದಂದು ಸಮೀಪದ ನಾರ್ಶಿ ಬನ್ನಿಕಟ್ಟೆಯಿಂದ ನಾಲ್ಕು ಕಾಲು ಮಂಟಪದವರೆಗೆ ಧಾರ್ಮಿಕ ಸಾಂಪ್ರದಾಯದಂತೆ ಶ್ರೀ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರುಗಳಿಗೆ ಶರನ್ನರಾತ್ರಿ ಅಂಗವಾಗಿ ವಿಶೇಷ ಪೂಜೆ ನೆರವೇರಿದವು.

ತಾಲೂಕು ದಂಡಾಧಿಕಾರಿ ಹುಸೇನ್ ಸರಕಾವಸ್ ದೇವಾಲಯಕ್ಕೆ ಭೇಟಿ ನೀಡಿದರು ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ‌.ಎಲ್ ಶಿವಪ್ರಸಾದ್ ಸೇರಿದಂತೆ ದೇವಸ್ಥಾನ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆಯ ಗ್ರಾಮ ಸಹಾಯಕರು ದೇವಾಲಯದಲ್ಲಿ ಕಾರ್ಯನಿರ್ವಹಿಸಿದರು. ಆರಕ್ಷಕರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

Leave A Reply

Your email address will not be published.

error: Content is protected !!