ಪ್ರಾಥಮಿಕ ಹಂತದಲ್ಲೇ ಕನ್ನಡ ಶಿಕ್ಷಣಕ್ಕೆ ಒತ್ತು ನೀಡಿದಾಗ ಕನ್ನಡಾಭಿಮಾನ ಬೆಳೆಸುವುದಕ್ಕೆ ಸಾಧ್ಯ

0 422

ಸೊರಬ : ಕರ್ನಾಟಕ ರಾಜ್ಯದಲ್ಲಿ ಕುವೆಂಪು, ದ.ರಾ. ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸೇರಿದಂತೆ ಒಟ್ಟು 8 ಜನ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ (Jnanapeeta Awards) ಪಡೆದು ಸಾಧನೆ ಮಾಡಿದ್ದಾರೆ ಎಂದು ವಕೀಲ ಸುಧಾಕರ್ ಪಿ ನಾಯ್ಕ್ ಹೇಳಿದರು.

ಚಂದ್ರಗುತ್ತಿಯ (Chandragutthi) ಗಾಂಧಿ ವೃತ್ತದಲ್ಲಿ ಶ್ರೀ ರೇಣುಕಾಂಬ ಕನ್ನಡ ರಾಜ್ಯೋತ್ಸವ (Kannada Rajyothsava) ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಾವೆಲ್ಲ ಮಾತನಾಡುವಂತಹ ಭಾಷೆ ನಮ್ಮ ಕನ್ನಡ ಭಾಷೆ ಹಾಗಾಗಿ ಪ್ರತಿಯೊಬ್ಬರೂ ಹಲವಾರು ಸಾಹಿತಿಗಳು ಅಧ್ಯಯನ ಮಾಡಿದಂತಹ ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

ಇಂಗ್ಲಿಷ್ ವ್ಯಾಮೋಹಕ್ಕೆ ಹೋಗುವುದನ್ನು ತಪ್ಪಿಸಬೇಕೆಂದರೆ ಕನ್ನಡ ಶಾಲೆಗಳನ್ನು ಸುಸಜ್ಜಿತವಾಗಿ ಕಟ್ಟಿ ಬೆಳೆಸುವಂತಹ ಅವಶ್ಯಕತೆ ಇದೆ. ಈಗಾಗಲೇ ಕರ್ನಾಟಕ ಸರ್ಕಾರದಿಂದ ಪ್ರತಿ ಹೋಬಳಿಗೊಂದು ಕನ್ನಡ ಪಬ್ಲಿಕ್ ಶಾಲೆ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಪ್ರಾಥಮಿಕ ಹಂತದಲ್ಲೇ ಕನ್ನಡ ಶಿಕ್ಷಣಕ್ಕೆ ಒತ್ತು ನೀಡಿದಾಗ ಕನ್ನಡಾಭಿಮಾನ ಬೆಳೆಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ಮಾತನಾಡಿ, ನಾಡು ನುಡಿ, ಜಲ, ಭಾಷೆ ಮತ್ತು ಕನ್ನಡದ ಮೇಲೆ ಪ್ರತಿಯೊಬ್ಬರು ಅಭಿಮಾನ ಇಟ್ಟುಕೊಳ್ಳಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ನಾಡು ನುಡಿ ಕಟ್ಟುವುದರ ಬಗ್ಗೆ ಇಂತಹ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ಕೂಡ ಆಯೋಜನೆ ಮಾಡುತ್ತಾ ಬರುತ್ತಿರುವ ಉದ್ದೇಶವೇನೆಂದರೆ ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ರಾಷ್ಟ್ರ ಪ್ರೇಮ, ನಾಡ ಪ್ರೇಮವನ್ನು ಮುಂದಿನ ಪೀಳಿಗೆಯವರು ಹೇಗೆ ಕ್ರೂಢೀಕರಿಸಬೇಕೆಂಬ ಕಾರಣದಿಂದಾಗಿ ರಾಷ್ಟ್ರೀಯ ಹಬ್ಬಗಳನ್ನು ಹಾಗೂ ನಾಡಹಬ್ಬಗಳನ್ನು ಆಚರಿಸುತ್ತಾ ಬರುತ್ತಿದ್ದೇವೆ ಎಂದರು.

1905ರಲ್ಲಿ ಆಲೂರು ವೆಂಕಟರಮಣ ಅವರು ಕರ್ನಾಟಕ ಏಕೀಕರಣ ಉದ್ದೇಶದಿಂದ ಚಳುವಳಿಯನ್ನು ಪ್ರಾರಂಭಿಸಿದರು. ಆ ಉದ್ದೇಶಗಳು 1950, 1956, 1973ಕ್ಕೆ ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ಘೋಷಣೆ ಆಯಿತು. ಇಂತಹ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ಉದ್ದೇಶವೇನೆಂದರೆ, ಅಂದಿನ ದಿನಮಾನಗಳಲ್ಲಿ ದೇಶವನ್ನು ಮತ್ತು ರಾಜ್ಯವನ್ನು ಕಟ್ಟುವುದಕ್ಕೆ ಶ್ರಮಿಸಿದಂತಹ ನಮ್ಮ ಹಿರಿಯರು, ಪೂರ್ವಜರಿಗೆ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ರತ್ನಾಕರ್ ಎಂ.ಪಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಜೀವಂತವಾಗಿ ಇರುವುದಕ್ಕೆ ಹಿಂದಿನವರು ಬಹಳಷ್ಟು ಹೋರಾಟಗಳನ್ನು ಮಾಡಿ ಕನ್ನಡಕ್ಕೆ ತನ್ನದೇ ಆದಂತಹ ಗುರಿಯನ್ನು ಇಟ್ಟಿದ್ದಾರೆ. ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ರಾಜ್ಯದ ಇತಿಹಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ಇದೇ ವೇಳೆಯಲ್ಲಿ ಗ್ರಾಮದ ಹಿರಿಯರು ಹಾಗೂ ಬಹಳಷ್ಟು ವರ್ಷಗಳ ಕಾಲ ಚಂದ್ರಗುತ್ತಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ ಸೀತಮ್ಮ ನವರಿಗೆ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಮಾತೃಭಾಷೆ ಕನ್ನಡದಲ್ಲಿ ಅಧ್ಯಯನ ಮಾಡಿದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪಂಪ, ರನ್ನ, ಕುಮಾರವ್ಯಾಸರು ಮತ್ತು ವಚನ ಸಾಹಿತಿಗಳು ರಚಿಸಿದ ಬಹಳಷ್ಟು ಲೇಖನಗಳನ್ನು ಅಧ್ಯಯನ ಮಾಡಿ ಪರಿಪೂರ್ಣರಾಗಲು ಕನ್ನಡದ ಅಧ್ಯಯನ ಅತೀ ಅವಶ್ಯಕವಾಗಿದೆ.
– ಸುಧಾಕರ್ ಪಿ ನಾಯ್ಕ್, ವಕೀಲರು ಚಂದ್ರಗುತ್ತಿ

    ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ ರವಿ. ಬಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯರಾದ ಎನ್.ಜಿ ನಾಗರಾಜ್, ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ,ಗ್ರಾಪಂ ಉಪಾಧ್ಯಕ್ಷ ಎಂ.ಬಿ ರೇಣುಕಾ ಪ್ರಸಾದ್, ಸದಸ್ಯರಾದ ರತ್ನಾಕರ್ ಎಂ.ಪಿ, ಶ್ರೀಮತಿ ಚಂದ್ರಕಾಂತ್, ಶಿಲ್ಪ ರವಿ, ಪ್ರಮುಖರಾದ ಯಶವಂತಪ್ಪ ಮಾಸ್ತರ್, ರಾಮಣ್ಣ ಸ್ವಾದಿ, ವಸಂತ್ ಶೇಟ್, ಗಣೇಶ್ ಮರಡಿ, ಹಯಾತ್ ಖಾನ್, ಪ್ರಜ್ವಲ್ ಚಂದ್ರಗುತ್ತಿ, ಶ್ರೀಧರ್ ಆಚಾರಿ, ಪರಮೇಶ್ ಕೆ, ಗೋಪಾಲ್ ಪೂಜಾರ್, ಪ್ರಕಾಶ್ ಮಿರ್ಜಿ, ಭರತ್ ಎಂ.ಕೆ, ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದವರು, ಅಂಗನವಾಡಿ ಕಾರ್ಯಕರ್ತೆಯರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    Leave A Reply

    Your email address will not be published.

    error: Content is protected !!