ಪುನೀತ್ ರಾಜ್‍ಕುಮಾರ್ ರವರಿಗೆ ಅಂತಿಮ ನಮನ ಸಲ್ಲಿಸಿದ ನಿಟ್ಟೂರು ಮಹಾಸಂಸ್ಥಾನಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು

0
456

ರಿಪ್ಪನ್‌ಪೇಟೆ : ಕನ್ನಡ ಸಿನಿಮಾ ರಂಗದ ಮೇರು ನಟ, ಸಮಾಜ ಸೇವಕ ಅಕಾಲಿಕವಾಗಿ ಮೃತರಾದ ಪುನೀತ್ ರಾಜ್‍ಕುಮಾರ್ ರವರಿಗೆ ನಿಟ್ಟೂರು ಮಹಾಸಂಸ್ಥಾನಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು ಹಾಗೂ ಕರ್ನಾಟಕದ ವಿವಿಧ ಮಠಗಳ ಸ್ವಾಮೀಜಿಗಳು ಅಂತಿಮ ನಮನ ಸಲ್ಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಸಿನಿಮಾ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ಡಾ. ರಾಜ್‍ಕುಮಾರ್ ಕುಟುಂಬದಲ್ಲಿ ಜನಿಸಿ ಬಾಲ್ಯದಲ್ಲೇ ಸಿನಿಮಾರಂಗವನ್ನು ಪ್ರವೇಶ ಮಾಡಿ ಅದ್ವಿತೀಯ ನಟನೆಯ ಮೂಲಕ ನಾಡಿನ ಜನತೆಯನ್ನು ಮನರಂಜಿಸಿದ ಕನ್ನಡ ಸಿನಿಮಾರಂಗದ ಯುವ ತಾರೆ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ.

ಯಾವುದೇ ಪ್ರಚಾರವಿಲ್ಲದೆ ಹತ್ತಾರು ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಮತ್ತು ಸರ್ಕಾರಿ ಶಾಲೆಗಳನ್ನು ದತ್ತು ರೂಪದಲ್ಲಿ ಪಡೆದುಕೊಂಡು ಅವುಗಳನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಸದ್ದಿಲ್ಲದೆ ಸಮಾಜ ಸೇವೆಯನ್ನು ಮಾಡಿದಂತಹ ಅಪರೂಪದ ಚಲನಚಿತ್ರ ನಟರಾಗಿದ್ದರು ಪುನೀತ್ ರಾಜ್‍ಕುಮಾರ್. ಹಾಗೆಯೇ ಸರಕಾರದ ವಿವಿಧ ಜಾಹೀರಾತುಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ರಾಯಭಾರಿಯಾಗಿ ಸೇವೆಯನ್ನು ಸಲ್ಲಿಸಿದಂತಹ ಮಹಾನ್ ವ್ಯಕ್ತಿಯಾಗಿದ್ದರು.

ಪುನೀತ್ ರಾಜ್‍ಕುಮಾರ್ ರವರ ಅಕಾಲಿಕ ಮರಣ ಕನ್ನಡ ಸಿನಿಮಾ ರಂಗಕ್ಕೆ ಮತ್ತು ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಇವರ ಕುಟುಂಬವರ್ಗಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.

“ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನ ಇಡೀ ಕರ್ನಾಟಕವನ್ನ ಅಘಾತಗೊಳಿಸಿದೆ. ಸದಾ ಲವಲವಿಕೆ, ನಗುಮುಖದಿಂದ ಇರುವ ಪುನೀತ್ ಸಾವು ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ತಮ್ಮ ನೆಚ್ಚಿನ ನಟನ ಅಗಲಿಕೆಯಿಂದ ಇಡೀ ಅಭಿಮಾನಿ ಬಳಗವೇ ಕಣ್ಣೀರ ಕಡಲಲ್ಲಿ ತೇಲಿತ್ತಾ ಆ ವಿಧಿಯ ಆಟಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕನ್ನಡದ ಯುವರತ್ನ ಸದಾ ಹಸನ್ಮುಖಿ ಸದಾ ನಗು ಮುಖದಿಂದಲೇ ಎಲ್ಲರನ್ನು ಮಾತನಾಡಿಸುತ್ತಿದ್ದ ಕನ್ನಡ ಸಿನಿಮಾ ರಂಗದಲ್ಲಿ ಅವರಂತೆ ಮತ್ತೊಬ್ಬ ನಟ, ವ್ಯಕ್ತಿ ಹುಟ್ಟಿಬರಲು ಸಾಧ್ಯವಿಲ್ಲ. ಅಪ್ಪು ನಿಜ ಜೀವನದಲ್ಲೂ ರಿಯಲ್ ಹೀರೋ ಆಗಿದ್ದರು. ನೊಂದವರ, ಬಡವರ ಪಾಲಿನ ದೇವರಾಗಿದ್ದರು. ಯಾರಿಗೂ ತಿಳಿಯದಂತೆ ಒಳ್ಳೆಯ ಕಾರ್ಯಗಳನ್ನ ನಟ ಪುನೀತ್ ರಾಜ್ ಕುಮಾರ್ ಮಾಡುತ್ತಾ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ.”

– ರೇಣುಕಾನಂದ ಸ್ವಾಮೀಜಿ, ಶ್ರೀ ನಾರಾಯಣ ಗುರು ಮಹಾ ಸಂಸ್ಥಾನ, ನಿಟ್ಟೂರು
ಜಾಹಿರಾತು

LEAVE A REPLY

Please enter your comment!
Please enter your name here