ಪ್ರತಿಷ್ಠಿತ ಮಾಮ್‍ಕೋಸ್‌ನ ನೂತನ ಉಪಾಧ್ಯಕ್ಷರಾಗಿ ಮಹೇಶ್ ಹುಲ್ಕುಳಿ ಆಯ್ಕೆ !

0
468

ತೀರ್ಥಹಳ್ಳಿ: ಪ್ರತಿಷ್ಠಿತ ಮಾಮ್‍ಕೋಸ್‌ನ ನೂತನ ಉಪಾಧ್ಯಕ್ಷರಾಗಿ ಹುಲ್ಕುಳಿ ಮಹೇಶ್‌ರವರು ಆಯ್ಕೆಯಾಗಿದ್ದಾರೆ.

ಮಾಮ್‍ಕೋಸ್‌ ಸಂಸ್ಥೆಯಲ್ಲಿ 2005 ರಿಂದ ಸತತ ಮೂರನೆಯ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಇವರು ಇಂದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೂಲತಃ ಇವರು ಕಟ್ಟೇಹಕ್ಕಲು ಸಮೀಪ ಹುಲ್ಕುಳಿಯವರಾಗಿದ್ದು ಕೃಷಿಕ ಕುಟುಂಬದಲ್ಲಿ ಜನಿಸಿದ್ದು ಕೃಷಿ ಪರಿವಾರದಲ್ಲಿ ಕೆಲಸ ಮಾಡಿದ ಇವರು ಪ್ರತಿಷ್ಠಾನದ ವಿಶ್ವಸ್ಥರಾಗಿ ಕೆಲಸ ಮಾಡಿದ್ದಾರೆ.

ಕೃಷಿಕ ಸಮಾಜದಲ್ಲಿ ನಿರ್ದೇಶಕರಾಗಿದ್ದರು ಹಾಗೆಯೇ ತೀರ್ಥಹಳ್ಳಿ ಹೇಮಾದ್ರಿ ಸೌಹಾರ್ದದಲ್ಲಿ ಪ್ರವರ್ತಕರಾಗಿ ಮತ್ತು ಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜಿಲ್ಲಾ ಸಹಕಾರ ಭಾರತೀಯ ಜಿಲ್ಲಾಧ್ಯಕ್ಷರಾಗಿ ಎರಡು ಬಾರಿ 2005 ರ ಸಹಕಾರ ಭಾರತಿ ಚುನಾವಣೆಯಲ್ಲಿಯೂ ಸಹ ಮುಂಚೂಣಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಸಹಕಾರಿ ಭೀಷ್ಮ ಎಂದೇ ಕರೆಯಲ್ಪಡುವ ನರಸಿಂಹ ನಾಯಕ್‌ರ ಜೊತೆಯಲ್ಲಿ ಕೆಲಸ ಮಾಡಿದ ಅನುಭವ ಕೂಡ ಇವರಿಗಿದ್ದು ಇಂದು ಮಹೇಶ್‌ರವರು ಮಾಮ್‍ಕೋಸ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here