ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಆಗ್ರಹಿಸಿ ತೀರ್ಥಹಳ್ಳಿ ಬಜರಂಗದಳದ ಕಾರ್ಯಕರ್ತರಿಂದ ಸಿಎಂಗೆ ಮನವಿ

0
291

ತೀರ್ಥಹಳ್ಳಿ : ಮತಾಂತರ ನಿಷೇಧ ಮಸೂದೆ ತರಲು ಆಗ್ರಹಿಸಿ ತೀರ್ಥಹಳ್ಳಿ ಬಜರಂಗದಳದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಹಲವಾರು ಕಡೆ ಜನರ ಬಡತನ, ಅನಾರೋಗ್ಯವನ್ನೇ ದುರುಪಯೋಗಪಡಿಸಿ, ಜನರ ಭಾವನೆಯೊಂದಿಗೆ ಆಟವಾಡಿ, ಆಸೆ ಆಮಿಷಗಳನೊಡ್ಡಿ ಮತಾಂತರದಿಂದ ನಿಮ್ಮ ಮೋಸದ ಪ್ರಚಾರ. ಮಾತಿನ ಮೋಡಿಗಳಿಂದ ಭ್ರಮೆಗೊಳಪಟ್ಟು ಸಮಸ್ಯೆಗಳು ನೀಗುತ್ತವೆ ಎಂಬ ಮತಾಂತರಗೊಳಿಸಿ ಸ್ವಇಚ್ಚೆಯ ಮತಾಂತರ ಎಂದು ಬಿಂಬಿಸಲಾಗುತ್ತಿದೆ.

ಇದರಿಂದ ಸಮಾಜದಲ್ಲಿ ಮತೀಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಕುಟುಂಬದಲ್ಲಿ ಒಬ್ಬರು ಮತಾಂತರಗೊಂಡರೆ ಕುಟುಂಬದ ಇತರ ವ್ಯಕ್ತಿಗಳ ಧಾರ್ಮಿಕ ಹಕ್ಕಿಗೆ ಧಕ್ಕೆ ಬಂದು ಮನೆಯ ಸದಸ್ಯರು ತೀವ್ರ ಮಾನಸಿಕ ಆಘಾತಕ್ಕೊಳಗಾಗುತ್ತಿರುವುದು ಕಂಡು ಬರುತ್ತಿದ್ದು ಅವರ ಮಾನಸಿಕ ಆರೋಗ್ಯಕ್ಕೆ ಕುಂದು ಬರುತ್ತಿದೆ. ಇದರಿಂದ ರಾಜ್ಯದಲ್ಲಿ ಶಾಂತಿ ಭಂಗವಾಗುತ್ತಿದ್ದು ಸುವ್ಯವಸ್ಥೆ ಹದಗೆಡುತ್ತಿದೆ.

ತಮ್ಮ ಧರ್ಮದಲ್ಲಿ ಆಚರಣೆ ಇಲ್ಲದಿದ್ದರೂ ಕೇವಲ ಅನ್ಯಧರ್ಮೀಯರನ್ನು ತಮ್ಮ ಧರ್ಮಕ್ಕೆ ಸೆಳೆಯುವ ದುರುದ್ದೇಶದಿಂದ ತಮ್ಮ ಧರ್ಮದಲ್ಲಿ “ಇಲ್ಲದ ವಿಧಿ ವಿಧಾನ” ಇದೆ ಎಂದು ನಂಬಿಸಿ ನಾಟಕ. ಹಿತದೃಷ್ಟಿಯಿಂದ ಪ್ರಬಲವಾದ ಮತಾಂತರ ಮಸೂದೆಯೊಂದು ತೀರಾ ಅವಶ್ಯಕತೆ ಇದೆ. ಈಗಾಗಲೇ ಕೆಲವೊಂದು ಮತಾಂತರ ಮಾಡುತ್ತಿರುವುದು ಕಂಡುಬರುತ್ತಿದೆ. ಅದರಿಂದ ಸಾಮಾಜಿಕ ಸುವ್ಯವಸ್ಥೆ, ಜನರ ಮಾನಸಿಕ ಆರೋಗ್ಯದ ನ್ಯಾಯಾಲಯಗಳೂ ಗುರುತಿಸಿರುವಂತ “ಲವ್ ಜಿಹಾದ್” ಮೂಲಕ ಮತಾಂತರಕಾಗಿ ಮದುವೆಯಾಗಿ ನಂತರ ಬಹುತೇಕ ಪ್ರಕರಣಗಳಲ್ಲಿ ಮದುವೆಯಾದ ಹುಡುಗಿಯ ಬಾಳನ್ನೇ ಹಾಳು ಮಾಡುವ ಮೂಲಕ ಸಮಾಜದಲ್ಲಿ ದೇಶದ ಇತರ ಹಲವು ರಾಜ್ಯಗಳಲ್ಲಿ “ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ” ಇದ್ದು, ನಮ್ಮ ರಾಜ್ಯದಲ್ಲಿ ಮತಾಂತರ ನಿಷೇಧಿಸಿ ಯಾವುದೇ ಕಾನೂನು ಇರುವುದಿಲ್ಲ.

ಆದ್ದರಿಂದ ರಾಜ್ಯದಲ್ಲಿ ಮತಾಂತರ ನಿಯಂತ್ರಿಸಲು ಪ್ರಬಲ ಕಾಯಿದೆ ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here