ಹೊಸನಗರ ಶಬರಿ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಮಗನಿಗೆ ತಂದೆಯಿಂದಲೇ ಚಾಕು ಇರಿತ !!

0
6070

ಹೊಸನಗರ: ಪಟ್ಟಣದ ಬಸ್ ನಿಲ್ದಾಣದ ಹೆಸರಾಂತ ಶ್ರೀ ಗುರು ವೆಜ್ ಹಾಗೂ ನ್ಯೂ ಶಬರಿ ಹೋಟೆಲ್‌ನಲ್ಲಿ ಇಂದು ಮಧ್ಯಾಹ್ನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗಾದಲ್ಲಿ ವಾಸ್ತವ್ಯ ಹೊಂದಿರುವ ಗೊರಗೋಡಿನ ಜಿ.ಆರ್ ತೀರ್ಥೇಶ್ ರವರು ಊಟ ಮಾಡುವ ವೇಳೆ ಏಕಾಏಕಿ ಹೋಟೆಲ್‌ಗೆ ಬಂದ ಅವರ ತಂದೆ ಸಂಕ್ಲಾಪುರ ರಾಜಪ್ಪ ಗೌಡ ಎಂಬುವವರು ಊಟ ಮಾಡುತ್ತಿದ್ದ ತೀರ್ಥೇಶ್ ಎಂಬುವವರಿಗೆ ಚಾಕುವಿನಿಂದ ಇರಿದಿದ್ದು ತೀರ್ಥೇಶ್ ರವರ ಬೆನ್ನು ಕೈ ಹಾಗೂ ಕಿಬ್ಬೊಟ್ಟೆಗೆ ತೀವ್ರ ಗಾಯವಾಗಿದೆ.

ತಕ್ಷಣ ತೀರ್ಥೇಶ್ ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ಜಮೀನು ವ್ಯಾಜ್ಯ ಸಂಬಂಧ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಹೊಸನಗರ ಪೊಲೀಸರು ಸಂಕಲಾಪುರ ರಾಜಪ್ಪ ಗೌಡರನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here