ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ! ಆರೋಪಿ ಬಂಧನ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

0 1,471

ರಿಪ್ಪನ್‌ಪೇಟೆ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಚಂದ್ರಪ್ಪ (52) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತೆ ಮೇಲೆ ಲೈಂಗಿಕ ದೌಜನ್ಯ ಎಸಗಿದ್ದಾನೆಂದು ಆರೋಪಿಸಿ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸರು ದೂರು ದಾಖಲಿಸಿ ಆರೋಪಿ ದೊಡ್ಡಿನಕೊಪ್ಪ ನಿವಾಸಿ ಹೊಸನಗರ ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರನಾಗಿರುವ ಚಂದ್ರಪ್ಪ ಎಂಬಾತನನ್ನು ಬಂಧಿಸಿದ್ದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಘಟನಾ ವಿವರ :

ಭಾನುವಾರ ಸಂಜೆ ವೇಳೆ ಆರೋಪಿ ಚಂದ್ರಪ್ಪನಿಗೆ ಸೇರಿದ ದಿನಸಿ ಅಂಗಡಿಗೆ ಚಾಕೋಲೆಟ್ ಖರೀದಿಸಲು ಬಂದ 08 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ನಂತರದಲ್ಲಿ ಈ ವಿಷಯ ಯಾರಿಗೂ ತಿಳಿಸದಂತೆ 10 ರೂ. ಹಣ ನೀಡಿ ನಾಳೆ ಬಾ ಮತ್ತಷ್ಟು ಚಾಕೊಲೇಟ್ ಕೊಡುತ್ತೇನೆ ಎಂದಿದ್ದಾನೆ. ಆ ನಂತರದಲ್ಲಿ ಬಾಲಕಿ ಅಳುತ್ತಾ ಮನೆಗೆ ಹೋಗಿ ಪೋಷಕರಿಗೆ ವಿಷಯವನ್ನು ತಿಳಿಸಿದ್ದಾಳೆ. ತಕ್ಷಣ ಬಾಲಕಿಯ ಪೋಷಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave A Reply

Your email address will not be published.

error: Content is protected !!