ಬುದ್ಧಿಮಾಂದ್ಯ ಯುವತಿ ಆರೈಕೆಗೆ ಸಹಾಯಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದ ಖಾಕಿಪಡೆ

0 68

ರಿಪ್ಪನ್‌ಪೇಟೆ: ಕಳೆದ 36 ವರ್ಷಗಳಿಂದ ನರದೌರ್ಬಲ್ಯದೊಂದಿಗೆ ಬುದ್ದಿಮಾಂದ್ಯ ಯುವತಿ ಆರೈಕೆಗಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ಇಲ್ಲಿನ ಗವಟೂರು ಗ್ರಾಮದ ಬಡಕುಟುಂಬದ ನೋವಿಗೆ ಪಟ್ಟಣದ ಖಾಕಿಪಡೆ ಸಹಾಯಹಸ್ತ ನೀಡುವ ಮೂಲಕ ಮಾನವೀಯತ ಮೆರೆದಿದ್ದಾರೆ.

ಗವಟೂರು ನಿವಾಸಿ ಆಟೋ ಚಾಲಕ ದೇವಪ್ಪಗೌಡರವರ ಮಗಳು 36 ವರ್ಷಗಳಿಂದ ನರದೌರ್ಬಲ್ಯ ಮತ್ತು ಬುದ್ದಿಮಾಂದ್ಯಕ್ಕೆ ಒಳಗಾದ ಅನಿತಾಳ ಆರೈಕೆಗಾಗಿ ಖರ್ಚು ಮಾಡುತ್ತಿದ್ದು ಚಿಕಿತ್ಸೆ ನೀಡಿದರೆ ಗುಣಮುಖಳಾಗುವ ಆಶಾಭಾವದಿಂದ ಲಕ್ಷ ಲಕ್ಷ ಹಣ ಖರ್ಚು ಮಾಡಿದ ಬಡಕುಟುಂಬ ಇಂದು ಸಾಲದ ಸುಳಿಗೆ ಸಿಲುಕಿತ್ತು ಸೂಕ್ತ ಚಿಕಿತ್ಸೆ ನೀಡದೇ ಮಗಳ ಅನಾರೋಗ್ಯವು ಮತ್ತಷ್ಟು ಉಲ್ಬಣಗೊಂಡಿತ್ತು. ಈ ಬಗ್ಗೆ ಮಾಹಿತಿಯನ್ನರಿತ ರಿಪ್ಪನ್‌ಪೇಟೆ ಠಾಣೆಯ ಸಿಬ್ಬಂದಿಗಳಾದ ಮಂಜಪ್ಪ ಹೊನ್ನಾಳ್ (ಹೆಚ್.ಸಿ) ನವೀನ್ ತ್ರಿವೇಣಿ ತಕ್ಷಣ ರಿಪ್ಪನ್‌ಪೇಟೆಯ ನೂತನ ಪಿಎಸ್‌ಐ ಪ್ರವೀಣ್ ಎಸ್.ಪಿ. ಗಮನಕ್ಕೆ ತಂದಿದ್ದಾರೆ. ಬಡಕುಟುಂಬದ ಬಗ್ಗೆ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನವಾಮನ ಸುತಾರ ಹೊಸನಗರ ವೃತ್ತ ನಿರೀಕ್ಷಕ ಗಿರೀಶ್‌ರವರ ಗಮನಕ್ಕೆ ತಂದು ರಿಪ್ಪನ್‌ಪೇಟೆ ಠಾಣೆಯ ಎಲ್ಲಾ ಸಿಬ್ಬಂದಿವರ್ಗದವರ ಮತ್ತು ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಸಂಗ್ರಹಣೆಯಾದ ಮೊತ್ತವನ್ನು ಬುದ್ದಿಮಾಂದ್ಯ ನರದೌರ್ಬಲ್ಯದಿಂದ ಬಳಲುತ್ತಿರುವ ಅನಿತಾ ಆಟೋ ದೇವಪ್ಪಗೌಡರ ಮನೆಗೆ ಪೊಲೀಸ್ ಸಿಬ್ಬಂದಿವರ್ಗ ತೆರಳಿ ಆರ್ಥಿಕಾ ನೆರವು ನೀಡುವುದರೊಂದಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ತಕ್ಷಣ ತುರ್ತು ಚಿಕಿತ್ಸೆ ಕೊಡಿಸುವಂತೆ ಪೋಷಕರಿಗೆ ಸೂಚಿಸಿದರು.

ಪೊಲೀಸರಲ್ಲಿಯೂ ಮಾನವೀಯತೆ ಇದೆ ಅವರು ದಾನ ಮಾಡುವವರು ಇರುತ್ತಾರೆಂಬುದಕ್ಕೆ ಬೇರೆ ಸಾಕ್ಷಿ ಏಕೆ ಇದೇ ಉದಾಹರಣೆ ಸಾಕು. ಹಗಲು ರಾತ್ರಿ ಎನ್ನದೇ ಎಲ್ಲರ ರಕ್ಷಣೆ ಮಾಡುವ ಪೊಲೀಸರು ತಮ್ಮ ಅಧಿಕಾರಾವಧಿಯಲ್ಲಿ ಇಂತಹ ಪುಣ್ಯದ ಕಾರ್ಯ ಮಾಡುವುದರೊಂದಿಗೆ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದಾರೆ.

ಕೆಲಸದ ಒತ್ತಡದಲ್ಲಿ ತಮ್ಮ ಮನೆಯ ಜವಾಬ್ದಾರಿಯನ್ನು ಮರೆಯುವ ಕಾಲದಲ್ಲಿ ಪೊಲೀಸರು ಮನೆ ಸಂಸಾರ ಮಕ್ಕಳು ಎಮಧು ನೋಡದೆ ರಾಜಕಾರಣಿಗಳ ಗಣ್ಯ ವ್ಯಕ್ತಿಗಳ ಕಳ್ಳತನ ರಾತ್ರಿ ಗಸ್ತು ಹೀಗೆ ಹತ್ತು ಹಲವು ಜನರ ರಕ್ಷಣೆಯ ಕಾರ್ಯದೊಂದಿಗೆ ಇಂತಹ ಅನಾರೋಗ್ಯ ಪೀಡಿತರ ಮತ್ತು ಅಪಘಾತದಿಂದ ತೀವ್ರ ಗಾಯಗೊಂಡವರ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಮೆಚ್ಚುವಂತದಾಗಿದ್ದು ಅದಕ್ಕೆ ಇನ್ನೊಂದು ಸಾಕ್ಷಿಯಾಗಿ ನರದೌರ್ಬಲ್ಯದಿಂದ ನೆರಳುತ್ತಿರುವ ಅನಿತಾಳ ಆರೋಗ್ಯ ರಕ್ಷಣೆಗೆ ಕೈಲಾದ ಸಹಾಯವನ್ನು ನೀಡಿ ಜನಮೆಚ್ಚುಗೆಗೆ ಕಾರಣವಾಗಿರುವ ಪೊಲೀಸರ ಕಾರ್ಯಕ್ಕೆ ನೂರೊಂದು ಸಲಾಮ್.

ಪೊಲೀಸ್ ಇಲಾಖೆಯವರು ನೀಡಿದಂತೆ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಲು ಕೋರಿಕೆ. ಪ್ರೇಮ ಎನ್.ಡಿ. ರಿಪ್ಪನ್‌ಪೇಟೆ ಎಸ್.ಬಿ.ಐ.ಶಾಖೆ ಅಕೌಂಟ್ ನಂಬರ್ 64188102751, IFSC;SBIN0040976, ಫೋನ್ ಪೇ ನಂ. 9060968943. ಹೆಚ್ಚಿನ ಮಾಹಿತಿಗಾಗಿ 9972752219 ಈ ಸಂಖ್ಯೆಗೆ ಕರೆ ಮಾಡಿ ತಿಳಿಯಬಹುದು.

Leave A Reply

Your email address will not be published.

error: Content is protected !!