ಕಳೂರು ಜುಮ್ಮಾ ಮಸೀದಿಯ ನಿಕಟಪೂರ್ವ ಅಧ್ಯಕ್ಷ ಭಾಷಾ ಸಾಬ್ ನಿಧನ

Written by Koushik G K

Published on:

ಹೊಸನಗರ : ಪಟ್ಟಣದ ಐತಿಹಾಸಿಕ ಪುರಾತನ ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ)ಯ ನಿಕಟಪೂರ್ವ ಅಧ್ಯಕ್ಷರು ಹಾಗೂ SPT ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಮಾಲಿಕರಾದ ಹೊಸನಗರ ಎಸ್.ಎನ್. ರಸ್ತೆ ನಿವಾಸಿ SPT ಭಾಷಾ ಸಾಬ್ (69) ಅವರು ಭಾನುವಾರ ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮೃತರು ಸುಮಾರು ನಾಲ್ಕು ವರ್ಷಗಳ ಕಾಲ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಜನವರಿ 2026ರಲ್ಲಿ ಅಧಿಕಾರ ಹಸ್ತಾಂತರಿಸಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸರಳತೆ, ಸೇವಾಭಾವನೆ ಮತ್ತು ಎಲ್ಲರನ್ನು ಒಟ್ಟುಗೂಡಿಸುವ ಗುಣಗಳಿಂದ ಅವರು ಗುರುತಿಸಿಕೊಂಡಿದ್ದರು.

ಮೃತರ ಅಗಲಿಕೆಗೆ ಜಮಾತಿನ ಬಾಂಧವರು ಹಾಗೂ ಪಟ್ಟಣದ ನಾಗರಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂತಿಮ ಸಂಸ್ಕಾರಗಳ ವಿವರವನ್ನು ಕುಟುಂಬ ವರ್ಗ ನಂತರ ತಿಳಿಸುವುದಾಗಿ ತಿಳಿಸಿದೆ.

ಕೃಷಿ ಸಮಾಜದಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕೃಷಿ ಕುರಿತ ಭಾಷಣ ಸ್ಪರ್ಧೆ : ನಗದು ಬಹುಮಾನ ಘೋಷಣೆ

Leave a Comment