ಸೇನಾ ಪರೀಕ್ಷೆಯಲ್ಲಿ ಫೇಲ್, ಮನನೊಂದ ವಿದ್ಯಾರ್ಥಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು !

0 430

ಶೃಂಗೇರಿ : ಸೇನಾ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿಚಾರಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದಲ್ಲಿ ನಡೆದಿದೆ.

ಕಾರ್ತಿಕ್ (23) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಭಾರತೀಯ ಸೇನೆಗೆ ಸೇರಬೇಕೆಂದು ಕಳೆದ 2 ವರ್ಷದಿಂದ ನಿರಂತರ ಪ್ರಯತ್ನಿಸುತ್ತಿದ್ದ ಕಾರ್ತಿಕ್ ಸೇನಾ ಪರೀಕ್ಷೆ ಬರೆದಿದ್ದ ಅದರಂತೆ ಫಲಿತಾಂಶವೂ ಬಂದಿದೆ ಆದರೆ ಫಲಿತಾಂಶದಲ್ಲಿ ಕಾರ್ತಿಕ್ ಫೇಲ್ ಆಗಿದ್ದಾನೆ ಇದರಿಂದ ಮನನೊಂದ ಆತ ಮನೆಯಲ್ಲೂ ಈ ವಿಚಾರ ಹೇಳಲು ನನಗೆ ಧೈರ್ಯ ಇಲ್ಲ ಎಂದು ಹೇಳಿ ಡೆತ್‌ನೋಟ್ ಬರೆದಿತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.

error: Content is protected !!