ಶೃಂಗೇರಿ : ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರೊಂದು ಮನೆಯ ಮೇಲೆ ಬಿದ್ದ ಘಟನೆ ತಾಲೂಕಿನ ಮಾರುತಿ ಬೆಟ್ಟದಲ್ಲಿ ನಡೆದಿದೆ. ಘಟನೆಯ ಪರಿಣಾಮ ಮನೆಯಲ್ಲಿದ್ದ ತಾಯಿ ಮಗುವಿಗೆ ಗಾಯವಾಗಿದೆ.
ಟ್ರ್ಯಾಕ್ಟರ್ ಬಿದ್ದ ರಭಸಕ್ಕೆ ಮನೆ ಸಂಪೂರ್ಣ ಜಖಂ ಆಗಿದ್ದು, ತಾಯಿ ಸಂಧ್ಯಾ, ಒಂದೂವರೆ ವರ್ಷದ ಮಗುವಿಗೆ ಗಾಯವಾಗಿದೆ. ಅದೃಷ್ಟವಶಾತ್ ತಾಯಿ-ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಶೃಂಗೇರಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.