ಮಧು ಬಂಗಾರಪ್ಪನವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ ; ಬೇಳೂರು

0 708

ಬೆಂಗಳೂರು/ಹೊಸನಗರ: ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ನಡುವಿನ ಸಮರ ಮುಂದುವರೆದಿದೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna), ಸಚಿವ ಮಧು ಬಂಗಾರಪ್ಪ (Madhu Bangarappa) ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಸಚಿವರಾದ ಮೇಲೆ ಮಧು ಬಂಗಾರಪ್ಪ ಅವರಿಗೆ ಅಹಂ ಜಾಸ್ತಿಯಾಗಿಬಿಟ್ಟಿದೆ. ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದು ಜರಿದಿದ್ದಾರೆ.

ನಾವು ಶಿವಮೊಗ್ಗದಲ್ಲಿ ಯಡಿಯೂರಪ್ಪ ಮಗ ರಾಘವೇಂದ್ರ ಅವರನ್ನು ಸೋಲಿಸಬೇಕು ಎಂದಿದ್ದೇವೆ. ಆದ್ರೆ ಸಚಿವ ಮಧು ಬಂಗಾರಪ್ಪ ನಮ್ಮಲ್ಲೇ ಒಡಕು ಮೂಡಿಸುತ್ತಿದ್ದಾರೆ. ನಾವು ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದವರು, ಪಳಗಿದವರು. ನಾವು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ಆದ್ರೆ ಒಟ್ಟಿಗೆ ಹೋಗಬೇಕಾದವರೇ ಪಕ್ಷವನ್ನು ಒಡೆಯುವುದಿಲ್ಲ ಎಂದು ಮಧು ಬಂಗಾರಪ್ಪ ವಿರುದ್ಧ ಬೇಳೂರು ಗೋಪಾಲಕೃಷ್ಣ ಹರಿಹಾಯ್ದಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಒಡೆದು ಎರೆಡು ಬಣವಾಗಿದೆ. ಅವರೇ ಅದಕ್ಕೆ ಕುಮ್ಮಕ್ಕು ನೀಡುವುದಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು ಎಂದಿದ್ದಾರೆ.


ಬೇಳೂರು ಕಚೇರಿಗೆ ಸಚಿವ ಮಧು ಬಂಗಾರಪ್ಪ ಭೇಟಿ !

ಹೊಸನಗರ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶನಿವಾರ ತಾಪಂ ಸಭೆಗೆ ಆಗಮಿಸುವ ಮುನ್ನ ಶಾಸಕ ಬೇಳೂರು ಗೋಪಾಲಕೃಷ್ಣ ಕಚೇರಿಗೆ ಭೇಟಿ ನೀಡಿ ಗಮನ ಸೆಳೆದರು.

ಶಾಸಕರ ಗೈರಿನ ನಡುವೆ ಕಚೇರಿಗೆ ಭೇಟಿ ನೀಡಿದ ಸಚಿವರಿಗೆ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಮತ್ತು ಕಚೇರಿ ಸಿಬ್ಬಂದಿಗಳು ಸಚಿವ ಮಧು ಬಂಗಾರಪ್ಪನವರಿಗೆ ಗೌರವ ಸಲ್ಲಿಸಿದರು.
ಸನ್ಮಾನ ಏನೂ ಬೇಡ ಎಂದು ಸಚಿವರು ನಿರಾಕರಿಸಿದಾಗ, ಸರ್ ನಮ್ಮ ಕಚೇರಿಗೆ ಬಂದಿದ್ದೀರಿ. ಗೌರವಿಸಬೇಕಾಗಿ ನಮ್ಮ ಕರ್ತವ್ಯ ಎಂದು ಗೌರವ ಸಮರ್ಪಿಸಿದರು. ಸಚಿವರು ಮತ್ತು ಶಾಸಕರ ನಡುವೆ ಮುನಿಸು ಇದೆ ಎಂಬ ಸನ್ನಿವೇಶದಲ್ಲಿ ಸಚಿವರ ಭೇಟಿ ಕುತೂಹಲ ಕಾರಣವಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಪಂ ಮಾಜಿ ಸದಸ್ಯರಾದ ಬಿ.ಜಿ.ಚಂದ್ರಮೌಳಿ, ಎರಗಿ ಉಮೇಶ್ ಇತರರಿದ್ದರು.

Leave A Reply

Your email address will not be published.

error: Content is protected !!